Sunday, May 19, 2024
Homeತಾಜಾ ಸುದ್ದಿಮಕ್ಕಳಿಂದಲೇ ತನ್ನ ದೇಹದಲ್ಲಿ ಚಿತ್ರ ಬಿಡಿಸಿ ವಿಡಿಯೋ ಮಾಡಿದ ವಿವಾದಿತ ಹೋರಾಟಗಾರ್ತಿ ರೆಹೆನಾ ಫಾತಿಮಾ

ಮಕ್ಕಳಿಂದಲೇ ತನ್ನ ದೇಹದಲ್ಲಿ ಚಿತ್ರ ಬಿಡಿಸಿ ವಿಡಿಯೋ ಮಾಡಿದ ವಿವಾದಿತ ಹೋರಾಟಗಾರ್ತಿ ರೆಹೆನಾ ಫಾತಿಮಾ

spot_img
- Advertisement -
- Advertisement -

ತಿರುವನಂತಪುರ, ಜೂ.24: ತನ್ನ ಸ್ವಂತ ಮಗ ಹಾಗೂ ಮಗಳನ್ನು ತನ್ನ ಬೆತ್ತಲೆ ದೇಹದ ಮೇಲೆ ಚಿತ್ರ ಬಿಡಿಸಲು ಬಳಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಸಾರ್ವಜನಿಕವಾಗಿ ಹಂಚಿಕೊಂಡ ಆರೋಪದಲ್ಲಿ ಮಹಿಳಾ ಸಮಾನತೆ ಹೋರಾಟಗಾರ್ತಿ ರೆಹನಾ ಫಾತಿಮಾ ವಿರುದ್ದ ಕೇರಳದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಕೀಲ, ಬಿಜೆಪಿ ಕಾರ್ಯಕರ್ತ ಅರುಣ್ ಪ್ರಕಾಶ್ ಎಂಬವರು ರೆಹನಾ ಫಾತಿಮಾ ವಿರುದ್ಧ ಕೇರಳದ ಪತ್ತನಂತಿಟ್ಟ ಜಿಲ್ಲೆ ತಿರುವಳ್ಳ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಅನ್ವಯ ರೆಹೆನಾ ವಿರುದ್ಧ ಬಾಲನ್ಯಾಯ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಯಾವುದೇ ಕ್ಷಣದಲ್ಲೂ ಬಂಧಿಸುವ ಸಾಧ್ಯತೆ ಇದೆ.

ಮಹಿಳಾ ಸಮಾನತೆ ವಿಚಾರದಲ್ಲಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ರೆಹನಾ ಫಾತಿಮಾ ತನ್ನ ಇಬ್ಬರು ಮಕ್ಕಳನ್ನು ಅರೆನಗ್ನ ದೇಹದ ಮೇಲೆ ಚಿತ್ರ ಬಿಡಿಸಲು ಬಳಸಿಕೊಂಡಿದ್ದಾರೆ. ತನ್ನ ಮಗ ಚಿತ್ರ ಬಿಡಿಸುತ್ತಿರುವುದನ್ನು ಸಂಪೂರ್ಣ ವಿಡಿಯೋ ಮಾಡಿ ಯುಟ್ಯೂಬ್ ಹಾಗೂ ಫೆಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ರೆಹನಾ ಫಾತಿಮಾ ವಿರುದ್ದ ಕಿಡಿಕಾರಿದ್ದಾರೆ. ತನ್ನದೇ ಮಕ್ಕಳನ್ನು ಈ ರೀತಿಯ ಲೈಂಗಿಕತೆಯ ವಿಡಿಯೋಗಳಿಗೆ ಬಳಸಿರುವುದರ ವಿರುದ್ದ ಕಿಡಿಕಾರಿದ್ದಾರೆ.

ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಮುಂದಾಗುವ ಮೂಲಕ ರೆಹೆನಾ ಅವರು ದೇಶದಾದ್ಯಂತ ಸುದ್ದಿಯಾಗಿದ್ದರು. ಅಯ್ಯಪ್ಪ ದೇವಸ್ಥಾನಕ್ಕೆ ಹತ್ತು ವರ್ಷದಿಂದ ಐವತ್ತು ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ಸುಪ್ರೀಂಕೋರ್ಟ್ 2018ರಲ್ಲಿ ತೆರವುಗೊಳಿಸಿದ ಸಂದರ್ಭ ರೆಹೆನಾ ಫಾತಿಮಾ ದೇಗುಲ ಪ್ರವೇಶಕ್ಕೆ ಮುಂದಾಗಿದ್ದರು. ಈ ಸಂದರ್ಭ ಆಕೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು. ಆ ಬಳಿಕ ಆಕೆಯನ್ನು ಉದ್ಯೋಗದಿಂದ ಬಿಎಸ್‌ಎನ್‌ಎಲ್ ಅಮಾನತು ಮಾಡಿತ್ತು.

ರೆಹನಾ ಜೂನ್​ 19ರಂದು ತನ್ನ ಯೂಟ್ಯೂಬ್​ ಚಾನಲ್​ನಲ್ಲಿ ಬಾಡಿ ಆರ್ಟ್ಸ್​ ಪಾಲಿಟಿಕ್ಸ್​ (#BodyArtPolitics) ಎಂಬ ಅಡಿಬರಹದೊಂದಿಗೆ ವಿಡಿಯೋವೊಂದನ್ನು ಪೋಸ್ಟ್​ ಮಾಡಿದ್ದರು. ವಿಡಿಯೋದಲ್ಲಿ ರೆಹನಾ ತನ್ನ ಮಗ ಹಾಗೂ ಮಗಳ ಕೈಯಿಂದ ಅರೆಬೆತ್ತಲೆ ದೇಹದ ಮೇಲೆ ಚಿತ್ರ ಬಿಡಿಸಿಕೊಳ್ಳುತ್ತಿರುವ ದೃಶ್ಯವಿದೆ. ವಿಡಿಯೋ ಮಾಡಿದ್ದರ ಉದ್ದೇಶದ ಬಗ್ಗೆ ತಿಳಿಸಿದ್ದ ರೆಹನಾ, ಲೈಂಗಿಕತೆ ಮತ್ತು ನಗ್ನತೆ ನಿಷೇಧವಾಗಿರುವ ಸಮಾಜದಲ್ಲಿ ಮಹಿಳೆಯರು ಲೈಂಗಿಕತೆ ಮತ್ತು ಅವರ ದೇಹದ ಬಗ್ಗೆ ಮುಕ್ತವಾಗಿರಬೇಕು ಎಂದು ಪುನರುಚ್ಚರಿಸುವುದಕ್ಕಾಗಿ ಈ ವಿಡಿಯೋವನ್ನು ಮಾಡಿದ್ದಾರಂತೆ.

ಪುರುಷರ ದೇಹಕ್ಕೆ ಹೋಲಿಸಿದರೆ ಮಹಿಳೆಯರ ದೇಹ ಮತ್ತು ಆಕೆಯ ಬೆತ್ತಲೆ ಸ್ಥಿತಿಯು 55 ಕೆ.ಜಿಗಿಂತ ಹೆಚ್ಚು ಮಾಂಸವನ್ನು ಹೊಂದಿರುತ್ತದೆ. ಮಹಿಳೆಯ ಕಾಲುಗಳನ್ನು ನೋಡುವಾಗ ಲೆಗ್ಗಿಂಗ್‌ಗಳು ಪ್ರಚೋದಿಸಲ್ಪಡುತ್ತವೆ. ಮೊಣಕಾಲುಗಳೊಂದಿಗೆ ನಿಂತಿರುವ ವ್ಯಕ್ತಿಯೊಬ್ಬ ತನ್ನ ಎದೆ ಮತ್ತು ಕಾಲುಗಳ ಮೇಲೆ ಅರ್ಧ ಬೆತ್ತಲೆಯಾಗಿ ಬಾಗಿದಾಗ, ಪುರುಷರು ಮತ್ತು ಮಹಿಳೆಯರ ದೇಹವನ್ನು ಸಮೀಪಿಸಲು ಒತ್ತಾಯಿಸುತ್ತದೆ. ಇದು ಪ್ರಸ್ತುತ ಸಮಾಜಕ್ಕೆ ನೀಡಲಾಗುತ್ತಿರುವ ಸುಳ್ಳು ಲೈಂಗಿಕ ಪ್ರಜ್ಞೆಯಾಗಿದ್ದು, ಸೌಂದರ್ಯವು ನೋಡುಗನ ಕಣ್ಣಿನಲ್ಲಿರುವಂತೆಯೇ, ನೋಡುವವರ ದೃಷ್ಟಿಯಲ್ಲಿಯೇ ಅಶ್ಲೀಲತೆಯೂ ಇದೆ ಎಂದು ರೆಹನಾ ಬರೆದುಕೊಂಡಿದ್ದಾರೆ.

#BodyArtandPolitics In a moral fascist society that look towards the female body as mere illusions. Exposing the views…

Posted by Rehana Fathima Pyarijaan Sulaiman on Thursday, 18 June 2020

- Advertisement -
spot_img

Latest News

error: Content is protected !!