Tuesday, June 18, 2024
Homeತಾಜಾ ಸುದ್ದಿಅರೆಬೆತ್ತಲೆ ಡ್ರಾಯಿಂಗ್ ಪ್ರಕರಣ; ನಿರೀಕ್ಷಣಾ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಕದ ತಟ್ಟಿದ ರೆಹಾನಾ ಫಾತಿಮಾ

ಅರೆಬೆತ್ತಲೆ ಡ್ರಾಯಿಂಗ್ ಪ್ರಕರಣ; ನಿರೀಕ್ಷಣಾ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಕದ ತಟ್ಟಿದ ರೆಹಾನಾ ಫಾತಿಮಾ

spot_img
- Advertisement -
- Advertisement -

ಕೊಚ್ಚಿನ್: ಅರೆನಗ್ನವಾಗಿ ದೇಹದ ಮೇಲೆ ಮಕ್ಕಳಿಂದ ಚಿತ್ರ ಬಿಡಿಸುವಂತೆ ಹೇಳಿ, ಘಟನೆಯ ವಿಡಿಯೋ ಹರಿಬಿಟ್ಟಿದ್ದ ಶಬರಿಮಲೆ ವಿವಾದ ಕು’ಖ್ಯಾತಿ’ಯ ಹೋರಾಟಗಾರ್ತಿ ರೆಹಾನಾ ಫಾತಿಮಾ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಫಾತಿಮಾ ವಿರುದ್ಧ ಪೋಕ್ಸೋ ಮತ್ತು ಐಟಿ ಕಾಯ್ದೆಯಡಿ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿದೆ. ಕೆಲವು ದಿನಗಳ ಹಿಂದೆ ಕೇರಳ ಹೈ ಕೋರ್ಟ್​​ ಕೂಡ ರೆಹಾನಾ ಫಾತಿಮಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಹಿನ್ನೆಲೆ, ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿತ್ತು. ಹೀಗಾಗಿ ರೆಹಾನಾ ಫಾತಿಮಾ ಈಗ ಜಾಮೀನಿಗಾಗಿ ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದಾರೆ.

ಈ ಹಿಂದೆ ಇದೇ ವಿಡಿಯೋ ವಿಚಾರವಾಗಿ ಬಿಎಸ್ಎನ್ಎಲ್ ಗೆ ರೆಹಾನಾ ಫಾತಿಮಾಳಿಂದ ಮುಜುಗರ ಉಂಟಾಗಿತ್ತು. ಪೊಲೀಸರು ಆಕೆಯ ಸರ್ಕಾರಿ ನಿವಾಸದ ಮೇಲೆ ರೇಡ್‌ ಮಾಡಿದ್ದರಿಂದ ಹಾಗೂ ನಿಮ್ಮ ಮೇಲಿನ ಆರೋಪಗಳಿಂದ ಬಿಎಸ್‌ಎನ್‌ಎಲ್‌ ವಿಶ್ವಾಸಾರ್ಹತೆಗೆ ಧಕ್ಕೆಯಾಗಿದೆ. ಮುಂದಿನ 30 ದಿನಗಳಲ್ಲಿ ಕೊಚ್ಚಿಯಲ್ಲಿನ ಸರ್ಕಾರಿ ನಿವಾಸ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿತ್ತು.

- Advertisement -
spot_img

Latest News

error: Content is protected !!