Saturday, June 15, 2024
Homeಮನರಂಜನೆಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ, ನಟಿ ರಿಯಾ ಚಕ್ರವರ್ತಿ ವಿರುದ್ಧ ದೂರು ದಾಖಲಿಸಿದ ಸುಶಾಂತ್...

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ, ನಟಿ ರಿಯಾ ಚಕ್ರವರ್ತಿ ವಿರುದ್ಧ ದೂರು ದಾಖಲಿಸಿದ ಸುಶಾಂತ್ ತಂದೆ

spot_img
- Advertisement -
- Advertisement -

ಪಟ್ನಾ: ನಟಿ ರಿಯಾ ಚಕ್ರವರ್ತಿ ತನ್ನ ಮಗನ ಕೈಯಿಂದ ಸಿಕ್ಕಾಪಟ್ಟೆ ಹಣ ಪಡೆದುಕೊಂಡಿದ್ದಾಳೆ ಮತ್ತು ಆತ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡಿದ್ದಾಳೆ ಎಂದು ಆರೋಪಿಸಿ ನಟ ಸುಶಾಂತ್ ಸಿಂಗ್ ಅವರ ತಂದೆ ಕೆ ಕೆ ಸಿಂಗ್ ಇಂದು ದೂರು ದಾಖಲಿಸಿದ್ದಾರೆ.

ಈ ಕುರಿತಾಗಿ ಸುಶಾಂತ್ ಅವರ ತಂದೆ ಕೆ.ಕೆ. ಸಿಂಗ್ ಅವರು ಪಟ್ನಾದ ರಾಜೀವ್ ನಗರ ಪೊಲೀಸ್ ಠಾಣೆಯಲ್ಲಿ ದೂರೊಂದನ್ನು ದಾಖಲಿಸಿದ್ದಾರೆ.

ಜೂನ್ 14 ರಂದು ಮುಂಬಯಿಯ ತನ್ನ ಫ್ಲ್ಯಾಟ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ನಟ ಸುಶಾಂತ್ ಸಿಂಗ್ ಅವರು ಕೆಲವು ಸಮಯ ನಟಿ ರಿಯಾ ಚಕ್ರವರ್ತಿಯೊಂದಿಗೆ ಡೇಟಿಂಗ್ ನಡೆಸಿದ್ದರು.

ದೂರು ದಾಖಲಿಸಿಕೊಂಡಿರುವ ಪಟ್ನಾ ಪೊಲೀಸರು ಈ ವಿಷಯಕ್ಕೆ ಸಂಬಂಧಿಸಿದಂತೆ ಸುಶಾಂತ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬಯಿ ಪೊಲೀಸ್ ತಂಡದ ಡಿಸಿಪಿಯವರನ್ನು ಭೇಟಿ ಮಾಡಿದ್ದಾರೆ.

ಜೂನ್ ತಿಂಗಳಿನಲ್ಲಿ ಮುಂಬಯಿ ತನಿಖಾ ತಂಡದ ಪೊಲೀಸ್ ಅಧಿಕಾರಿಗಳು ಸುಶಾಂತ್ ಅವರ ತಂದೆಯನ್ನು ಪ್ರಶ್ನಿಸಿ ಅವರ ಹೇಳಿಕೆಯನ್ನು ಪಡೆದುಕೊಂಡಿದ್ದರು. ಆದರೆ ಈ ಸಂದರ್ಭದಲ್ಲಿ ಕೆ.ಕೆ. ಸಿಂಗ್ ಅವರು ಅಲ್ಲಿ ಯಾವುದೇ ದೂರು ದಾಖಲಿಸಿರಲಿಲ್ಲ.

ಮಾತ್ರವಲ್ಲದೇ ಈ ವಿಚಾರದಲ್ಲಿ ನನಗೆ ಯಾರ ಮೇಲೂ ಆರೋಪ ಮಾಡಲು ಏನೂ ಇಲ್ಲ ಎಂದು ಹೇಳಿದ್ದರು. ಆದರೆ ಇದೀಗ ಸುಶಾಂತ್ ಅವರ ತಂದೆ ಪಟ್ನಾದಲ್ಲಿ ತನ್ನ ಮಗನ ಮಾಜೀ ಗೆಳತಿಯ ವಿರುದ್ಧ ದೂರು ದಾಖಲಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

- Advertisement -
spot_img

Latest News

error: Content is protected !!