Thursday, June 4, 2026
Homeಕರಾವಳಿಬೆಳ್ತಂಗಡಿಯ ಶಿರ್ಲಾಲಿನಲ್ಲಿ ಕೆಂಪು‌ ಮಳೆ

ಬೆಳ್ತಂಗಡಿಯ ಶಿರ್ಲಾಲಿನಲ್ಲಿ ಕೆಂಪು‌ ಮಳೆ

- Advertisement -
- Advertisement -

ಬೆಳ್ತಂಗಡಿ :  ಕರಾವಳಿಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಇತ್ತ  ಬೆಳ್ತಂಗಡಿ ತಾಲೂಕಿನ ಶಿರ್ಲಾಲುವಿನಲ್ಲಿ ಕೆಂಪು ಮಳೆ ಸುರಿದಿದೆ.

ಶಿರ್ಲಾಲು ನಿವಾಸಿ ಸೂರ್ಯನಾರಾಯಣ ಭಟ್ ಅವರ ಮನೆಯಲ್ಲಿ ಬಕೆಟ್, ಡ್ರಮ್ ಗಳಲ್ಲಿ ಕೆಂಪು ನೀರು ತುಂಬಿಕೊಂಡಿರುವುದು ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಈ ನೀರನ್ನು ಪರೀಕ್ಷೆ ನಡೆಸಲು ಕಳುಹಿಸಲಾಗಿದೆ.

ಪರಿಸರದಲ್ಲಿ ಒಂದೇ ಮನೆ ಇದ್ದು, ಒಂದು ಕಿ.ಮೀ.ದೂರದಲ್ಲಿ ಇರುವ ಶಿರ್ಲಾಲು ಪೇಟೆಯಲ್ಲಿ ಇಟ್ಟಿರುವ ಬಕೆಟ್ ನಲ್ಲಿ ಕೆಂಪು ನೀರು ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ. ಇದೀಗ ಅಳದಂಗಡಿ ಪರಿಸರದ ವಿವಿದೆಡೆಗಳಲ್ಲಿಯೂ ಕೆಂಪು ಮಳೆ ಬಂದಿರುವುದಾಗಿ ತಿಳಿದು ಬಂದಿದೆ ಇದಕ್ಕೆ ಕಾರಣವೇನು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

- Advertisement -

Latest News

error: Content is protected !!