Wednesday, June 26, 2024
Homeತಾಜಾ ಸುದ್ದಿನಿವೇದಿತಾ ಗೌಡ – ಚಂದನ್ ಶೆಟ್ಟಿ ದಾಂಪತ್ಯ ಮುರಿದು ಬೀಳೋಕೆ ಕಾರಣ ಏನು?

ನಿವೇದಿತಾ ಗೌಡ – ಚಂದನ್ ಶೆಟ್ಟಿ ದಾಂಪತ್ಯ ಮುರಿದು ಬೀಳೋಕೆ ಕಾರಣ ಏನು?

spot_img
- Advertisement -
- Advertisement -

ಬೆಂಗಳೂರು;  ರ್ಯಾಂಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ 4 ವರ್ಷಗಳ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಪರಸ್ಪರ ಒಪ್ಪಿಗೆಯ  ಮೇರೆಗೆ ಚಂದನ್ ಹಾಗೂ ನಿವೇದಿತಾ ದೂರವಾಗಿದ್ದಾರೆ.

ಆದರೆ ಪರಸ್ಪರ ಪ್ರೀತಿಸಿ ಮದುವೆಯಾದ ಈ ಮುದ್ದಾದ ಜೋಡಿ ಪರಸ್ಪರ ದೂರವಾಗೋಕೆ ಏನ್ ಕಾರಣ ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರು.ಇದೀಗ ಅವರು ದೂರವಾಗೋಕೆ ಮಗು ವಿಚಾರ ಕಾರಣ ಅನ್ನೋದು ಗೊತ್ತಾಗಿದೆ.

ತನ್ನ ವಯಸ್ಸು 35 ಆಯ್ತು ಇನ್ನು ತಡ ಮಾಡಿದ್ರೆ ಕಷ್ಟ ಅಂತಾ ಚಂದನ್ ಶೆಟ್ಟಿ ಮಗು ಪಡೆಯೋ ಬಗ್ಗೆ ಆಸಕ್ತಿ ಇಟ್ಟುಕೊಂಡಿದ್ದರು.ಆದರೆ  ನಿವೇದಿತಾ ಗೌಡ ತಾಯಿ ಆಗೋ ಬಗ್ಗೆ ಆಸಕ್ತಿ ಹೊಂದಿರಲಿಲ್ಲ ಎನ್ನಲಾಗಿದೆ.ಇತ್ತೀಚೆಗೆ ನಟಿ ನಿವೇದಿತಾಗೆ ಹೆಚ್ಚು ಸಿನಿಮಾ ಆಫರ್ ಗಳು ಬರುತ್ತಿವೆ. ಹಾಗಾಗಿ ಮಗು ಆದ್ರೆ ಸಿನಿಮಾ ಕರಿಯರ್ ಹಾಳಾಗುತ್ತೆ ಅಂತಾ ನಿವೇದಿತಾ ಮಗು ಮಾಡಿಕೊಳ್ಳಲು ತಯಾರಿರಲಿಲ್ಲ. ಇದೇ ಕಾರಣಕ್ಕೆ ಪರಸ್ಪರ ಒಪ್ಪಿಗೆ ಪಡೆದು ವಿಚ್ಛೇದನ ಪಡೆದಿದ್ದಾರೆ.

ಮಿಡಿಯೇಷನ್ ನಲ್ಲಿ ವಿಚ್ಚೇದನಕ್ಕೆ ಇಬ್ಬರೂ 13b of family court act ಅಡಿ ಒಪ್ಪಿಗೆ  ನೀಡಿದ್ದರಿಂದ ಕೋರ್ಟ್ ಇವರಿಗೆ ಡಿವೋರ್ಸ್ ನೀಡಿದೆ. ಪರಸ್ಪರ ಯಾರೊಬ್ಬರ ಮೇಲೂ ಯಾವುದೇ ಆರೋಪ ಮಾಡದೇ ಒಪ್ಪಿಗೆ ನೀಡಿದ್ದರಿಂದ ಬೇಗ ಡಿವೋರ್ಸ್ ದೊರೆತಿದೆ.

ಮೊದಲಿಗೆ ನ್ಯಾಯಾಧೀಶರು ಇಬ್ಬರ ಕರೆದಿದ್ದಾರೆ. ಈ ವೇಳೆ ಪರಸ್ಪರ ಒಪ್ಪಿಗೆ ಮೇರೆಗೆ ನಾವಪ ಬೇರೆ ಆಗಲು ನಿರ್ಧರಿಸಿದ್ದೇವೆ ಎಂದು ಜಡ್ಜ್ ಮುಂದೆ ದಂಪತಿ ಹೇಳಿಕೆ ನೀಡಿದ್ದಾರೆ. ಈ ವೇಳೆ ಜಡ್ಜ್ ಯಾವ ಕಾರಣಕ್ಕೆ ಎಂದು ಕೇಳಿದ್ದಾರೆ. ಆಗ ದಂಪತಿ ಸ್ವಲ್ಪ ಭಿನ್ನಾಭಿಪ್ರಾಯ ಇದೆ.ಇಬ್ಬರಿಗೂ ಕರಿಯರ್ ಬಗ್ಗೆ ಕನಸುಗಳು ಇವೆ.ಹೀಗಾಗಿ ಖುಷಿಯಾಗಿಯೇ ಒಪ್ಪಿದ್ದೇವೆ ಎಂದಿದ್ದಾರೆ.

ಆಗ ಜಡ್ಜ್ ಸರಿ ಸ್ವಲ್ಪ ಸಮಯ ಕಾಯಲು ಸೂಚನೆ ಕೊಟ್ಟಿದ್ದಾರೆ.ಪುನಃ ಬಂದು ಚಂದನ್ ದಂಪತಿ ಅಕ್ಕಪಕ್ಕ ಕುಳಿತಿದ್ದಾರೆ. ವಿಚ್ಚೇದನ ಪಡೆಯಲು ಕೋರ್ಟ್ ಮುಂದೆ ಒಪ್ಪಿಗೆ ಸೂಚಿಸಿದ್ದಾರೆ. ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿ ಮಾಡಿದ್ದಾರೆ. ಒಪ್ಪಿಗೆ ಪತ್ರಕ್ಕೆ ಸಹಿ ಹಿನ್ನಲೆ ಕೋರ್ಟ್ ನಿವೇದಿತಾ ಹಾಗೂ ಚಂದನ್ ಶೆಟ್ಟಿಗೆ ವಿಚ್ಚೇದನ ಮಂಜೂರು ಮಾಡಿದೆ. ಆ ಮೂಲಕ ನಾಲ್ಕು ವರ್ಷಗಳ ಅವರ ದಾಂಪತ್ಯ ಜೀವನ ಅಂತ್ಯವಾಗಿದೆ.ಇನ್ನು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಕೈ ಕೈ ಹಿಡಿದುಕೊಂಡೇ ಕೋರ್ಟ್ ಇಂದ ಹೊರಗೆ ಬಂದಿದ್ದಾರೆ.ಇನ್ನು ನಿನ್ನೆ ಅಂದರೆ ಜೂನ್ 6 ರಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇನ್ನು ಈ ಬಗ್ಗೆ ಅಂತಿಮ ತೀರ್ಪು 31 ಆಗಸ್ಟ್ 2024 ರಂದು ಬರಲಿದೆ.

- Advertisement -
spot_img

Latest News

error: Content is protected !!