Friday, June 5, 2026
Homeಕರಾವಳಿಮಂಗಳೂರು: ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಂದ ಪ್ರಕರಣ: ಮಕ್ಕಳನ್ನು ಕೊಲ್ಲುವ ನಿರ್ಧಾರ ಮಾಡಿದ್ದ್ಯಾಕೆ ತಂದೆ?

ಮಂಗಳೂರು: ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಂದ ಪ್ರಕರಣ: ಮಕ್ಕಳನ್ನು ಕೊಲ್ಲುವ ನಿರ್ಧಾರ ಮಾಡಿದ್ದ್ಯಾಕೆ ತಂದೆ?

- Advertisement -
- Advertisement -

ಮಂಗಳೂರು: ಕಿನ್ನಿಗೋಳಿಯಲ್ಲಿ ಪತ್ನಿ ಮತ್ತು ಮೂವರು ಮಕ್ಕಳನ್ನು ಬಾವಿಗೆಸೆದು ವ್ಯಕ್ತಿಯೋರ್ವ ನಿನ್ನೆ ಆತ್ಮಹತ್ಯೆಗೆ ಯತ್ನಿಸಿದ್ದು ಪ್ರಕರಣ ಇಡೀ ಕರಾವಳಿಯನ್ನು ಬೆಚ್ಚಿಬೀಳಿಸುವಂತೆ‌ ಮಾಡಿತ್ತು. ಇನ್ನು ಘಟನೆಗೆ ಕಾರಣ ಏನು ಎಂದು‌ ಜನರಿಗೆ ಭಾರೀ ಪ್ರಶ್ನೆ ಮೂಡಿತ್ತು. ಇದೀಗ ತನಿಖೆಯ ವೇಳೆ ಮಹತ್ವದ ಮಾಹಿತಿ ಸಿಕ್ಕಿದೆ.

ಹಿತೇಶ್ ಶೆಟ್ಟಿಗಾರ್ MRPLನಲ್ಲಿ ಕ್ಯಾಂಟೀನ್ ಕೆಲಸಕ್ಕಿದ್ದು ಅಲ್ಲಿಂದ ಬಿಟ್ಟು ಬಂದು ಕಳೆದ ಕೆಲ ತಿಂಗಳ ಹಿಂದೆ ಕಿನ್ನಿಗೋಳಿ ಮುಲ್ಕಿ ಬ್ಯಾಂಕಿನಲ್ಲಿ ಸಾಲ ಮಾಡಿ ಸಿಯಾಳ ಮತ್ತು ಹೂವಿನ ಅಂಗಡಿ ನಡೆಸುತ್ತಿದ್ದ. ಆರ್ಥಿಕ ಮುಗ್ಗಟ್ಟಿನಿಂದ ಮಾನಸಿಕವಾಗಿ ನೊಂದಿದ್ದ. ಇದೇ ಕಾರಣಕ್ಕೆ ಈತ ಪತ್ನಿ ಮಕ್ಕಳನ್ನು ಕೊಂದು‌ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

ಇದಲ್ಲದೆ ಘಟ‌ನೆ ನಡೆದ ವೇಳೆ ಮಕ್ಕಳ ಅಳು ಕೇಳಿ ಹೂವಿನ ವ್ಯಾಪಾರಿ ನಾಸಿರ್ ಎಂಬವರು ಜೀವದ ಹಂಗು ತೊರೆದು ಬಾವಿಗೆ ಇಳಿದು ದಂಪತಿ ಹಾಗೂ ಮಕ್ಕಳನ್ನು ರಕ್ಷಿಸಲು ಯತ್ನಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

- Advertisement -

Latest News

error: Content is protected !!