Wednesday, June 24, 2026
Homeಕರಾವಳಿಉಡುಪಿಹಿರಿಯಡ್ಕದಲ್ಲಿ ಹಾಡಹಗಲೇ ಮಾರಾಕಾಯುಧಗಳಿಂದ ಕೊಚ್ಚಿ ರಿಯಲ್ಎಸ್ಟೇಟ್ ಉದ್ಯಮಿಯ ಕೊಲೆ

ಹಿರಿಯಡ್ಕದಲ್ಲಿ ಹಾಡಹಗಲೇ ಮಾರಾಕಾಯುಧಗಳಿಂದ ಕೊಚ್ಚಿ ರಿಯಲ್ಎಸ್ಟೇಟ್ ಉದ್ಯಮಿಯ ಕೊಲೆ

- Advertisement -
- Advertisement -

ಉಡುಪಿ : ಹಿರಿಯಡ್ಕದಲ್ಲಿ ವ್ಯಕ್ತಿಯೋರ್ವನನ್ನು ದುಷ್ಕರ್ಮಿಗಳ ತಂಡವೊಂದು ಅಟ್ಟಾಡಿಸಿ ಮಾರಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಇಂದು ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಗ್ರಾಮದ ರಿಯಲ್ಎಸ್ಟೇಟ್ ಉದ್ಯಮಿ ಕಿಶನ್ ಹೆಗ್ಡೆ ಎಂದು ಗುರುತಿಸಲಾಗಿದೆ.

ಕಿಶನ್ ಹೆಗ್ಡೆ ಹಾಗೂ ಮತ್ತೋರ್ವ ಕಾರಿನಲ್ಲಿ ಹಿರಿಯಡ್ಕ ಬಳಿ ಬರುತ್ತಿದ್ದಂತೆ ಎರಡು ಕಾರುಗಳಲ್ಲಿ ಬಂದ ದುಷ್ಕರ್ಮಿಗಳು ಕಿಶನ್ ಹೆಗ್ಡೆ ಮಾರಾಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಹಿರಿಯಡ್ಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಕೊಲೆಗೆ ಹಳೇ ವೈಷಮ್ಯವೇ ಕಾರಣ ಅಂತಾ ಹೇಳಲಾಗುತ್ತಿದೆ.

- Advertisement -

Latest News

error: Content is protected !!