Friday, April 26, 2024
Homeಉದ್ಯಮದೇಶದ ಜಿಡಿಪಿ ಬೆಳವಣಿಗೆ ಶೇ.10.5ಕ್ಕೆ ಏರಿಕೆ: ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ RBI

ದೇಶದ ಜಿಡಿಪಿ ಬೆಳವಣಿಗೆ ಶೇ.10.5ಕ್ಕೆ ಏರಿಕೆ: ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ RBI

spot_img
- Advertisement -
- Advertisement -

ನವದೆಹಲಿ: ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆಯಾದ ನಂತರ ಇದೇ ಮೊದಲ ಬಾರಿಗೆ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಈ ಬಾರಿಯ ಹಣಕಾಸು ನೀತಿ ಘೋಷಣೆ ಮಾಡಿದ್ದು, ರೆಪೊ ದರವನ್ನು ಶೇ.4ರಷ್ಟು ಮತ್ತು ರಿವರ್ಸ್ ರೆಪೊ ದರವನ್ನು ಶೇ.3.35ಕ್ಕೆ ಇಳಿಕೆ ಮಾಡಲು ನಿರ್ಧರಿಸಿದೆ.

ರೆಪೋ ದರ ಅಂದರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ವಾಣಿಜ್ಯ ಬ್ಯಾಂಕ್ ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರ. ಇನ್ನು ರಿವರ್ಸ್ ರೆಪೋ ದರ ಅಂದರೆ ವಾಣಿಜ್ಯ ಬ್ಯಾಂಕ್ ಗಳ ಹಣಕ್ಕೆ ರಿಸರ್ವ್ ಬ್ಯಾಂಕ್ ನೀಡುವ ಬಡ್ಡಿ ದರ.

ಈಗಲೂ ಹಣದುಬ್ಬರವು ಆರ್ ಬಿಐ ಪಾಲಿಗೆ ಚಿಂತೆಯಾಗಿದೆ. ಕೊರೊನಾವೈರಸ್ ಬಿಕ್ಕಟ್ಟಿನ ಆಘಾತದಿಂದ ಆರ್ಥಿಕತೆಯನ್ನು ಚೇತರಿಕೆ ಮಾಡಲು ರಿಸರ್ವ್ ಬ್ಯಾಂಕ್ ತನ್ನ ಪ್ರಮುಖ ಸಾಲ ದರ ಅಂದರೆ ರೆಪೊ ದರವನ್ನು ಮಾರ್ಚ್ 2020ರಿಂದ 115 ಬೇಸಿಸ್ ಪಾಯಿಂಟ್ ಗಳಷ್ಟು ಕಡಿತಗೊಳಿಸಿದೆ. ಕೇಂದ್ರೀಯ ಬ್ಯಾಂಕ್ ಕಳೆದ ಮೇ 22, 2020ರಂದು ತನ್ನ ನೀತಿ ದರವನ್ನು ಕಡಿತಮಾಡಿತ್ತು, ಆಗ, ಕೊವಿಡ್-19 ಆರ್ಥಿಕತೆಗೆ ಅಭೂತಪೂರ್ವ ಸವಾಲನ್ನು ಒಡ್ಡಿತು. ಅಂದಿನಿಂದ, ಬ್ಯಾಂಕಿಂಗ್ ನಿಯಂತ್ರಕವು ರೆಪೊ ದರವನ್ನು ಕಾಯ್ದುಕೊಂಡಿದೆ.

ವಾಣಿಜ್ಯ ಬ್ಯಾಂಕ್ ಗಳಿಗೆ ಆರ್ ಬಿಐ ಸಾಲ ನೀಡುವ ಪ್ರಮುಖ ಬಡ್ಡಿದರ – 19 ವರ್ಷಗಳ ಕನಿಷ್ಠ ಮಟ್ಟದಲ್ಲಿ 4 ಪ್ರತಿಶತದಷ್ಟು ಸ್ಥಿರವಾಗಿದೆ. ರಿವರ್ಸ್ ರೆಪೊ ದರ – ಆರ್ ಬಿಐ ಬ್ಯಾಂಕ್ ಗಳಿಂದ ಸಾಲ ಪಡೆಯುವ ದರ ಶೇ.3.35ರಷ್ಟಿದೆ. ಜಿಡಿಪಿ 22ರಲ್ಲಿ ಶೇ.10.5ಕ್ಕೆ ಆರ್ ಬಿಐ ನಿರೂಪಿಸುತ್ತಿದೆ ಎಂದು ಗವರ್ನರ್‌ ಹೇಳಿದ್ದು, ಜೂನ್ ತ್ರೈಮಾಸಿಕದಲ್ಲಿ ತೀವ್ರ ಕುಸಿತ ಕಂಡ ಭಾರತ, 2021ರ ಮಾರ್ಚ್ 31ಕ್ಕೆ ಅಂತ್ಯವಾಗುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ.7.7ಕ್ಕೆ ಕುಸಿಯುವ ನಿರೀಕ್ಷೆ ಇದೆ. ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ.11ರಷ್ಟು ಪ್ರಗತಿಯೊಂದಿಗೆ ವಿ-ಆಕಾರದ ಚೇತರಿಕೆಯ ನಿರೀಕ್ಷೆಯನ್ನ ಹೊಂದಿರುವುದಾಗಿ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆ ಭವಿಷ್ಯ ನುಡಿದಿದೆ.

- Advertisement -
spot_img

Latest News

error: Content is protected !!