- Advertisement -
![]()
- Advertisement -
ಬೆಳ್ತಂಗಡಿ : ವಿವಾಹಿತ ಮಹಿಳೆಗೆ ಅಶ್ಲೀಲವಾಗಿ ಕರೆ ಮಾಡಿ ಮಾತಾನಾಡಿ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಬಂಟ್ವಾಳ ತಾಲೂಕಿನ ಕಾವಳಮೂಡೂರು ನಿವಾಸಿ ನಿತೇಶ್ ಮತ್ತು ಮುಡಿಪು ನಿವಾಸಿ ರವೀಂದ್ರ ಶೆಟ್ಟಿ ಮುಡಿಪು ಆರೋಪಿಗಳ ವಿರುದ್ಧ 15-05-2024 ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಬೆಳ್ತಂಗಡಿ ನ್ಯಾಯಾಲಯದಲ್ಲಿ ಜಾರ್ಜ್ ಶೀಟ್ ಸಲ್ಲಿಕೆ ಮಾಡಿದ ಬಳಿಕ ಎರಡನೇ ಆರೋಪಿ ಸೌಜನ್ಯ ಪರ ಹೋರಾಟಗಾರ ರವೀಂದ್ರ ಶೆಟ್ಟಿ ಮುಡಿಪು ಬೆಳ್ತಂಗಡಿ ಕೋರ್ಟ್ ಗೆ ಹಾಜರಾಗದೆ ಇದ್ದಿದ್ದರಿಂದ ಬಂಧಿಸಲು ವಾರಂಟ್ ಹೊರಡಿಸಲಾಗಿತ್ತು. ಈಗ ಪೊಲೀಸರ ಬಂಧನದ ಭೀತಿಯಿಂದ ಅ.3 ರಂದು ಬೆಳ್ತಂಗಡಿ ಕೋರ್ಟ್ ಗೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾನೆ.
- Advertisement -


