- Advertisement -
- Advertisement -
ಬೆಳ್ತಂಗಡಿ: ಶಿರ್ಲಾಲ್ ಗ್ರಾಮದ ಮಣಿಲದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಅಪರೂಪದ ಕರಿ ಚಿರತೆಯೊಂದು ಸೆರೆಯಾಗಿದೆ.
ಮಣಿಲದ ಪದ್ಮನಾಭ ಅವರ ಮನೆಯ ಸಮೀಪ ವೇಣೂರು ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಕೆಲ ದಿನಗಳ ಹಿಂದೆ ಬೋನು ಇರಿಸಿದ್ದರು. ಅ.10ರ ಶನಿವಾರ ಬೆಳಗ್ಗೆ ಕರಿ ಚಿರತೆ ಬೋನಿಗೆ ಬಿದ್ದಿದ್ದು, ಅಪರೂಪದ ಪ್ರಾಣಿಯನ್ನು ನೋಡಲು ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಸೆರೆಯಾದ ಚಿರತೆ ಆರೋಗ್ಯವಾಗಿದ್ದು, ಅರಣ್ಯ ಇಲಾಖೆಯ ಪಶುವೈದ್ಯರಿಂದ ತಪಾಸಣೆ ನಡೆಸಿದ ಬಳಿಕ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಗುವುದು ಎಂದು ವೇಣೂರು ವಲಯ ಅರಣ್ಯಾಧಿಕಾರಿ ಭರತ್ ಯು.ಜಿ. ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಹರಿಪ್ರಸಾದ್, ಗಸ್ತು ವನಪಾಲಕ ಮಂಜುನಾಥ್ ಬಿ.ಎಸ್., ಅರಣ್ಯ ವೀಕ್ಷಕರಾದ ವೆಂಕಪ್ಪ ನಾಯ್ಕ, ಪೂವಪ್ಪ ನಾಯ್ಕ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.
- Advertisement -


