Sunday, May 12, 2024
Homeತಾಜಾ ಸುದ್ದಿಅಪ್ರಾಪ್ತ ಬಾಲಕ ಮೇಲೆ ಅತ್ಯಾಚಾರವೆಸಗಿದ ಅಪ್ರಾಪ್ತ ಬಾಲಕರು: ಯಾರಿಗೂ ಹೇಳಬೇಡ ಎಂದು 20 ರೂ ಕೊಟ್ಟು...

ಅಪ್ರಾಪ್ತ ಬಾಲಕ ಮೇಲೆ ಅತ್ಯಾಚಾರವೆಸಗಿದ ಅಪ್ರಾಪ್ತ ಬಾಲಕರು: ಯಾರಿಗೂ ಹೇಳಬೇಡ ಎಂದು 20 ರೂ ಕೊಟ್ಟು ಬೆದರಿಕೆ ಹಾಕಿದ ಹುಡುಗರು

spot_img
- Advertisement -
- Advertisement -

ಲಕ್ನೋ: 13 ವರ್ಷದ ಬಾಲಕನ ಮೇಲೆ ಅಪ್ರಾಪ್ತರು ಲೈಂಗಿಕ ದೌರ್ಜನ್ಯವೆಸೆಗಿ ಯಾರಿಗೂ ಹೇಳಬೇಡವೆಂದು 20 ರೂಪಾಯಿ ಕೊಟ್ಟು ಹೋಗಿರುವ ಘಟನೆ ಉತ್ತರಪ್ರದೆಶದ ಆಲಿಗಢದಲ್ಲಿ ನಡೆದಿದೆ.

ಬಾಲಕ ತನ್ನ ತಂದೆಯೊಂದಿಗೆ ಗದ್ದೆಗೆ ಹೋಗಿದ್ದನು. ಈ ವೇಳೆ ಕೃಷಿ ಉಪಕರಣವನ್ನು ತೆಗೆದುಕೊಂಡು ಬಾ ಅಂತ ತಂದೆ ಮಗನನ್ನು ಕಳುಹಿಸಿದ್ದಾರೆ. ಈ ವೇಳೆ ಮಾರ್ಗ ಮಧ್ಯದಲ್ಲಿ ಸಿಕ್ಕ ಇಬ್ಬರು ಬಾಲಕರು ಆತನನ್ನು ನಿರ್ಜನ ಅರಣ್ಯಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಅಲ್ಲದೇ ಈ ವಿಚಾರವನ್ನು ಯಾರಿಗೂ ತಿಳಿಸಬೇಡ ಎಂದು 20 ರೂಪಾಯಿ ಕೊಟ್ಟು ಬೆದರಿಕೆ ಹಾಕಿ ಕಳುಹಿಸಿದ್ದಾರೆ.

ಬಾಲಕ ಮನೆಗೆ ಬಂದು ನಡೆದಿರುವ ಘಟನೆಯನ್ನು ಪೋಷಕರಿಗೆ ಹೇಳಿದ್ದಾನೆ. ಕೂಡಲೇ ಬಾಲಕನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -
spot_img

Latest News

error: Content is protected !!