Friday, June 5, 2026
Homeತಾಜಾ ಸುದ್ದಿಗಂಡನ ಮನೆಗೆ ಹೋಗುವಾಗ ಬಿಕ್ಕಿ ಬಿಕ್ಕಿ ಅತ್ತ ನವವಧು: ಪತಿಯ ಮನೆ ಸೇರುವ ಮೊದಲೇ ಹೃದಯಾಘಾತಕ್ಕೆ...

ಗಂಡನ ಮನೆಗೆ ಹೋಗುವಾಗ ಬಿಕ್ಕಿ ಬಿಕ್ಕಿ ಅತ್ತ ನವವಧು: ಪತಿಯ ಮನೆ ಸೇರುವ ಮೊದಲೇ ಹೃದಯಾಘಾತಕ್ಕೆ ಬಲಿ

- Advertisement -
- Advertisement -

ಒಡಿಶಾ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು ಗಂಡನ ಮನೆಗೆ ಹೋಗುವ ವೇಳೆ ಬಿಕ್ಕಿ ಬಿಕ್ಕಿ ಅತ್ತು ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಒಡಿಶಾದ ಸೋನೆಪುರದಲ್ಲಿ ನಡೆದಿದೆ.

ರೋಸಿ ಸಾಹು ಸಾವನ್ನಪ್ಪಿರುವ ನವವಧು. ಜುಲಂಡಾ ಗ್ರಾಮದ ನಿವಾಸಿಯಾಗಿದ್ದ ಯುವತಿಗೆ ಟೆಂಟಲು ಗ್ರಾಮದ ಬಿಸಿಕೇಶನ್ ಎಂಬಾತನೊಂದಿಗೆ ವಿವಾಹವಾಗಿತ್ತು. ಆದರೆ ವಿವಾಹವಾಗಿ ಕೆಲವೇ ಗಂಟೆಗಳಲ್ಲಿ ಆಕೆ ಸಾವನ್ನಪ್ಪಿದ್ದಾಳೆ. ರೋಸಿಯನ್ನು ಗಂಡನ ಮನೆಗೆ ಕಳುಹಿಸುವ ಶಾಸ್ತ್ರವನ್ನು ಮಾಡಲಾಗುತ್ತಿತ್ತು. ಈ ವೇಳೆ ರೋಸಿ ತವರು ಮನೆಯಿಂದ ಪತಿಯ ಮನೆಗೆ ಹೋಗಬೇಕು ಎಂದು ಕಣ್ಣೀರು ಹಾಕಿದ್ದಾಳೆ. ಈ ವೇಳೆ ಹೃದಯಾಘಾತದಿಂದ ನಿಂತಲ್ಲೇ ಕುಸಿದು ಬಿದ್ದಿದ್ದಾಳೆ.

ಕೂಡಲೇ ಅಲ್ಲಿ ಇದ್ದವರು ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ರೋಸಿ ಆಸ್ಪತ್ರೆಗೆ ಕರೆತರುವ ಮೊದಲೇ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ. ಮದುವೆ ಸಂಭ್ರಮದಲ್ಲಿ ಇರಬೇಕಾದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ

- Advertisement -

Latest News

error: Content is protected !!