Monday, June 8, 2026
Homeಅಪರಾಧಮಂಗಳೂರು:ಟಿವಿ ನೋಡಲು ಬಂದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ; ಮನೆ ಮಾಲೀಕನ ಬಂಧನ!

ಮಂಗಳೂರು:ಟಿವಿ ನೋಡಲು ಬಂದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ; ಮನೆ ಮಾಲೀಕನ ಬಂಧನ!

- Advertisement -
- Advertisement -

ಮಂಗಳೂರು : ಮನೆಗೆ ಟಿವಿ ನೋಡಲು ಬಂದ ಎಂಟು ವರ್ಷದ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಲ್ಲಿ ಮನೆ ಮಾಲೀಕನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಪೆರ್ಮುದೆ ನಿವಾಸಿ ರಾಮಕೃಷ್ಣ ಬಂಧಿತ ಆರೋಪಿ. ಶಿವಮೊಗ್ಗ ಮೂಲದ ಮಹಿಳೆಯೊಬ್ಬರು ರಾಮಕೃಷ್ಣನ ಬಾಡಿಗೆ ಮನೆಯಲ್ಲಿ ಮೂವರು ಮಕ್ಕಳೊಂದಿಗೆ ವಾಸವಿದ್ದರು. ಆಗಸ್ಟ್ 21ರಂದು ತುರ್ತು ಕೆಲಸಕ್ಕಾಗಿ ತಾಯಿ ಶಿವಮೊಗ್ಗಕ್ಕೆ ಮಕ್ಕಳನ್ನು ಬಿಟ್ಟು ಹೋಗಿದ್ದು,ಮಕ್ಕಳನ್ನು ನೋಡಿಕೊಳ್ಳುವಂತೆ ಆರೋಪಿಯ ಪತ್ನಿಗೆ ಹೇಳಿದ್ದರು.

ಸಂಜೆಯ ವೇಳೆಗೆ ಮೂವರು ಮಕ್ಕಳು ಆರೋಪಿಯ ಮನೆಗೆ ಟಿವಿ ನೋಡಲು ಹೋಗಿದ್ದಾರೆ. ಅದೇ ವೇಳೆ ಆರೋಪಿಯ ಪತ್ನಿ ಕಟ್ಟಿಗೆ ತರಲೆಂದು ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿದ್ದರು. ಈ ಸಂದರ್ಭ ಆರೋಪಿ ಎಂಟು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ .

ಮರುದಿನವೂ ಆರೋಪಿ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರಕ್ಕೆ ಯತ್ನಿಸಿದ್ದು, ಸಂತ್ರಸ್ತೆಯ ತಾಯಿ ಶಿವಮೊಗ್ಗದಿಂದ ಹಿಂತಿರುಗಿ ಬಂದಾಗ ಮಗಳು ವಿಷಯ ತಿಳಿಸಿದ್ದಾಳೆ.ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಗೆ ಬಾಲಕಿಯ ತಾಯಿ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ

- Advertisement -

Latest News

error: Content is protected !!