Monday, June 8, 2026
Homeಕರಾವಳಿಕಡಬ;ಕಾಣಿಯೂರಿನಲ್ಲಿ ಮಹಿಳೆಯ ಅತ್ಯಾಚಾರಕ್ಕೆ ಯತ್ನ ಪ್ರಕರಣ: ಇಬ್ಬರು ಆರೋಪಿಗಳಿಗೆ  ನಿರೀಕ್ಷಣಾ ಜಾಮೀನು ಮಂಜೂರು

ಕಡಬ;ಕಾಣಿಯೂರಿನಲ್ಲಿ ಮಹಿಳೆಯ ಅತ್ಯಾಚಾರಕ್ಕೆ ಯತ್ನ ಪ್ರಕರಣ: ಇಬ್ಬರು ಆರೋಪಿಗಳಿಗೆ  ನಿರೀಕ್ಷಣಾ ಜಾಮೀನು ಮಂಜೂರು

- Advertisement -
- Advertisement -

ಕಡಬ :  ಕಾಣಿಯೂರಿನಲ್ಲಿಬೆಡ್‌ಶೀಟ್ ಮಾರಾಟಕ್ಕೆಂದು ಕಾರೊಂದರಲ್ಲಿ ಬಂದು   ಮಹಿಳೆಯೋರ್ವರ ಮಾನಭಂಗಕ್ಕೆ ಯತ್ನಿಸಿದ್ದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಅ. 20ರಂದು ಬೆಡ್‌ಶೀಟ್ ಮಾರಾಟಕ್ಕೆಂದು ಕಾರೊಂದರಲ್ಲಿ ಬಂದಿದ್ದ ಮಂಗಳೂರು ಅಡ್ಡೂರು ನಿವಾಸಿಗಳಾದ ರಮೀಝುದ್ದೀನ್ ಮತ್ತು ಆತನ ಸಂಬಂಧಿಕ ಮಹಮ್ಮದ್ ರಫೀಕ್ ಎಂಬವರು ಮನೆಯಲ್ಲಿ ಒಬ್ಬಂಟಿಯಾಗಿದ್ದ  ಮಹಿಳೆಯೋರ್ವರ ಮಾನಭಂಗಕ್ಕೆ ಯತ್ನಿಸಿದ್ದಾಗಿ ಆರೋಪಿಸಲಾಗಿತ್ತು.

ಘಟನೆ ಕುರಿತು ಮಹಿಳೆ ನೀಡಿದ್ದ ದೂರಿನ ಮೇರೆಗೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

- Advertisement -

Latest News

error: Content is protected !!