Sunday, May 19, 2024
Homeಕರಾವಳಿಬೆಳ್ತಂಗಡಿ ಅರಣ್ಯ ಪ್ರದೇಶದಲ್ಲಿ ರಕ್ತಚಂದನ ಪತ್ತೆ ಪ್ರಕರಣ : ವೇಣೂರಿನ ಇಬ್ಬರ ಮೇಲೆ‌ ಪ್ರಕರಣ...

ಬೆಳ್ತಂಗಡಿ ಅರಣ್ಯ ಪ್ರದೇಶದಲ್ಲಿ ರಕ್ತಚಂದನ ಪತ್ತೆ ಪ್ರಕರಣ : ವೇಣೂರಿನ ಇಬ್ಬರ ಮೇಲೆ‌ ಪ್ರಕರಣ ದಾಖಲು.

spot_img
- Advertisement -
- Advertisement -

ಬೆಳ್ತಂಗಡಿ : ಬೆಂಗಳೂರು ರಾಮಮೂರ್ತಿ ನಗರ ಪೊಲೀಸರು ಗಾಂಜಾ ಪ್ರಕರಣ ಸಂಬಂಧ ದಕ್ಷಿಣ ‌ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಆರೋಪಿಗಳಿಬ್ಬರ ಪತ್ತೆಗೆ ಬಂದಾಗ 16 ತುಂಡು ರಕ್ತಚಂದನ ಪತ್ತೆಯಾಗಿತ್ತು. ಆ ರಕ್ತಚಂದನವನ್ನು ಪೊಲೀಸರು ಮಾರಾಟ ಮಾಡಿದ್ದಾರೆ ಎಂದು ಬೆಂಗಳೂರು ನಿವಾಸಿ ಜಗನ್ ಕುಮಾರ್ ಜೆ ಎಂಬವರು ರಾಮಮೂರ್ತಿ ನಗರ ‌ಪೊಲೀಸರ ಮೇಲೆ, ಹಿರಿಯ ಮೂರು ಪೊಲೀಸ್ ಅಧಿಕಾರಿಗಳಿಗೆ 16/03/2022 ರಂದು ದೂರು ನೀಡಿದ್ದರು. ಅದರಂತೆ ಇದೀಗ ಎಫ್ಐಆರ್ ದಾಖಲಾಗಿದೆ. ಈ ಪ್ರಕರಣದಲ್ಲಿ ಹಲವು ಆರೋಪಗಳು ಕೇಳಿ ಬರುತ್ತಿದ್ದು ಈ ಬಗ್ಗೆ ತನಿಖೆ ಮಾಡಲು ಡಿಸಿಪಿ ಭೀಮಾಶಂಕರ್ ಗುಳೇದ್ ರವರಿಗೆ ಸೂಚಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ್ ರಾವ್ ತಿಳಿಸಿದ್ದಾರೆ. ಈ ನಡುವೆ ರಾಮಮೂರ್ತಿ ನಗರ ಠಾಣೆಯಲ್ಲಿ ರಕ್ತಚಂದನದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಿಎಸ್ಐ ರವರು 18/03/2022 ರಂದು ದೂರು ನೀಡಿದ್ದಾರೆ.


ಆರೋಪಿಗಳ ವಿವರ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ನಿವಾಸಿ 1) ಸುದರ್ಶನ್ /ಪಡಿ (30), 2) ಶ್ರವಣ್ ಅಚಾರಿ(30) ಹಾಗೂ ಮತ್ತಿತರ ಮೇಲೆ ಬೆಂಗಳೂರು ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಮೌನೇಶ್ ಪ್ರಕರಣ ದಾಖಲಿಸಿದ್ದಾರೆ.
ಎಫ್ಐಆರ್ ನಲ್ಲಿ ಏನಿದೆ?: ಬೆಂಗಳೂರು ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಪಿಎಸ್ಐ ಮೌನೇಶ್ ಅವರು 18/03/2022 ರಂದು ಠಾಣೆಯಲ್ಲಿ ದೂರು ನೀಡಿದ್ದಾರೆ. ಅದರಲ್ಲಿ 22/10/2021 ರಂದು ನನಗೆ ಮಂಗಳೂರಿನಿಂದ ಬೆಂಗಳೂರಿನ ರಾಮಮೂರ್ತಿ ನಗರಕ್ಕೆ 200 ಕೆ.ಜಿ ಗಾಂಜಾ ತರಲು ತಯಾರಿ ನಡೆಸಿದ್ದಾರೆ ಎಂಬ ವಿಚಾರ ನಂಬಿಕಾರ್ಹ ಮೂಲಗಳಿಂದ ತಿಳಿದ ಕಾರಣ, ಸದರಿ ವಿಚಾರವನ್ನು ನಮ್ಮ ಮೇಲಾಧಿಕಾರಿಗಳಿಗೆ ತಿಳಿಸಿ ನಾನು ಮತ್ತು ನನ್ನ ಸಿಬ್ಬಂದಿ ದೇವೇಂದ್ರ ನಾಯ್ಕ ಅವರು ಇಂದು ವಾಹನದಲ್ಲಿ ಮತ್ತೊಂದು ವಾಹನದಲ್ಲಿ ಅರವಿಂದ ಕುಮಾರ್ ಪಿಎಸ್ಐ ಮತ್ತು ಸಿಬ್ಬಂದಿ ಸುನೀಲ್ ,ಅಶ್ವಿನ್ ‌ಮತ್ತು ಮಾಹಿತಿದಾರರೊಂದಿಗೆ ಬೆಂಗಳೂರಿನಿಂದ ಮಂಗಳೂರು ವೇಣೂರಿಗೆ ತೆರಳಿರುತ್ತೇವೆ. ಗಾಂಜಾವನ್ನು ಖರೀದಿಸುವ ನೆಪದಲ್ಲಿ ನಾನು ಮತ್ತು ದೇವೇಂದ್ರ ಮೊದಲಿಗೆ ಒಂದು ವಾಹನದಲ್ಲಿ ವೇಣೂರು ಕಾಡಿಗೆ ಹೋದೆವು. ಆಗ ಇಬ್ಬರು ಆರೋಪಿಗಗಳು ನಮ್ಮನ್ನು ಭೇಟಿ ಮಾಡಿ ನೀವು ಕೇಳಿದಷ್ಟು ಗಾಂಜಾ ಕೊಡುತ್ತೇವೆ. ಗಾಂಜಾವನ್ನು ಕಾಡಿನ‌ ಮಧ್ಯ ಒಂದು ಜಾಗದಲ್ಲಿ ಇಟ್ಟಿದ್ದು ಹಣ ಕೊಟ್ಟು ನಂತರ ನಿಮಗೆ ಗಾಂಜಾವನ್ನು ನೀಡುತ್ತೇವೆಂದು ತಿಳಿಸಿದರು. ಆರೋಪಿಗಳು ಒಂದು ಕಿ.ಮೀ ಕಾಡಿನೊಳಗೆ ನಡೆಸಿಕೊಂಡು ಹೋಗಿ ಕಾಡಿನ ಒಂದು ಮಧ್ಯ ಸ್ಥಳದಲ್ಲಿ ಚೀಲಗಳಲ್ಲಿ ಗಾಂಜಾವನ್ನು ಮರೆಮಾಚಿಟ್ಟಿದ್ದರು, ಅದನ್ನು ನಮಗೆ ತೋರಿಸಿ ನಮ್ಮ ಬಳಿ ಸದ್ಯ 200 ಕೆ.ಜಿ ಇದೆ ಎಂದರು. ಇದೇ ಸಮಯಕ್ಕೆ ಇನ್ನೊಂದು ವಾಹನದಲ್ಲಿ ಅರವಿಂದ ಕುಮಾರ್ ಪಿಎಸ್ಐ ಮತ್ತು ಸಿಬ್ಬಂದಿಯಾದ ರಾಜು ,ಸುನಿಲ್, ಅಶ್ವಿನ್ ಅವರು ದಾಳಿ‌ ಮಾಡಲು ನಮ್ಮ ಕಡೆಗೆ ಬರುತ್ತಿದ್ದಂತೆ ಅನುಮಾನಗೊಂಡು ಆರೋಪಿಗಳು ಓಡಿ ಹೋಗಿದ್ದಾರೆ. ಕತ್ತಲಾಗಿದ್ದ ಕಾರಣ ನಾವು ಆರೋಪಿಗಳನ್ನು ಹಿಡಿಯಲು ಸಾಧ್ಯವಾಗಿಲ್ಲ. ನಂತರ ಅಲ್ಲಿದ್ದ ಗಾಂಜಾವನ್ನು ವಶಪಡಿಸಿಕೊಂಡು ಆರೋಪಿಗಳ ಬಗ್ಗೆ ಮಾಹಿತಿ ಕಲೆ‌ಹಾಕಿದೆವು. ಇನ್ನು ವಶಪಡಿಸಿಕೊಂಡ ಚೀಲಗಳನ್ನು ಪರಿಶೀಲಿಸಿದಾಗ ಅದರಲ್ಲಿ 16 ರಕ್ತಚಂದನದ ತುಂಡುಗಳಿರೋದು ಪತ್ತೆಯಾಗಿದೆ. ನಂತರ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿವಾಸಿಗಳಾದ ಸುದರ್ಶನ್ ಮತ್ತು ಶ್ರವಣ್ ಎಂದು ತಿಳಿದು ಬಂದಿದೆ.

ನಂತರ ಅವರ ಪತ್ತೆಗಾಗಿ ಪ್ರಯತ್ನಿಸಿದಾಗ ಪತ್ತೆಯಾಗಿರುವುದಿಲ್ಲ. ನಂತರ ದಿನಾಂಕ 24/03/2021 ರಂದು ಠಾಣೆಗೆ ಸದರಿ ಕಟ್ಟಿಗೆಗಳಿದ್ದ 3 ಚೀಲಗಳನ್ನು ಠಾಣೆಯ ಸ್ಟೋರ್ ರೂಂ ನಲ್ಲಿ ಭದ್ರವಾಗಿ ಇಟ್ಟಿರುವುತ್ತೇವೆ. ಠಾಣೆಯಲ್ಲಿ ಶುಚಿಗೊಳಿಸುತ್ತಿದ್ದಾಗ ಸ್ಟೋರ್ ರೂಂನಲ್ಲಿ ಚೀಲವನ್ನು ಪೊಲೀಸ್ ಇನ್ಸ್ಪೆಕ್ಟರ್ ರವರು ಗಮನಿಸಿ ಸದರಿ ಚೀಲದಲ್ಲಿದ್ದ ಕಟ್ಟಿಗೆಗಳ ಬಗ್ಗೆ ವಿಚಾರಿಸಿದಾಗ ಮೇಲ್ಕಂಡ ವಿಚಾರವನ್ನು ತಿಳಿಸಿರುತ್ತೇವೆ.ನಂತರ ಸದರಿ‌ ಕಟ್ಟಿಗೆಗಳು ರಕ್ತಚಂದನದ ತುಂಡುಗಳಂತೆ ಕಂಡು ಬಂದಿದ್ದರಿಂದ ಪ್ರಕರಣ ದಾಖಲಿಸಲು ಸೂಚಿಸುತ್ತಾರೆ. ರಕ್ತಚಂದನ ತುಂಡುಗಳನ್ನು ಕಳ್ಳತನ ಮಾಡಿ ಅಕ್ರಮ ದಾಸ್ತಾನು ಮಾಡಿ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡಿ ಸರಕಾರಕ್ಕೆ ನಷ್ಟವನ್ನುಂಟು ಮಾಡಿ ವಂಚಿಸಿರುವ ಇಬ್ಬರು‌ ಮತ್ತು ಇತರರ ವಿರುದ್ಧ CODE OF CRIMINAL PROCEDURE 1973(u/s -102 ,41(D) ; KARNATAKA FOREST ACT 1963 (u/s-86) ; IPC 1860 (u/s -34 ,379,420) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ದೂರಿನ ಪ್ರತಿಯಲ್ಲಿದೆ.

ಪೊಲೀಸರ ಮೇಲೆ‌ ಫೈರಿಂಗ್ ಮಾಡಿ ಆರೋಪ : ಇನ್ನೂ ಪ್ರಕರಣ ನಡೆದ ವೇಳೆ ಆರೋಪಿಗಳು ತಪ್ಪಿಸಿಕೊಳ್ಳುವ ವೇಳೆ ಪಿಸ್ತೂಲ್‌ನಿಂದ ಪೊಲೀಸರ ಮೇಲೆ ಫೈರಿಂಗ್ ಮಾಡಿ ಇಬ್ಬರು ಆರೋಪಿಗಳು ಕೈಕೋಳ ಸಮೇತ ತಪ್ಪಿಸಿಕೊಂಡಿದ್ದಾರೆ ಎಂದು ಎಂಬ ಮಾತುಗಳು ಕೇಳಿಬಂದಿದ್ದು ಈ ಬಗ್ಗೆ ಎಲ್ಲಾ ತನಿಖೆ‌‌ ಮಾಡಿ ತಪ್ಪು ನಡೆದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!