Friday, May 17, 2024
Homeಕರಾವಳಿಸುರತ್ಕಲ್ ಜಲೀಲ್ ಹತ್ಯೆ ಪ್ರಕರಣ; ಘಟನೆಯನ್ನು ಖಂಡಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ

ಸುರತ್ಕಲ್ ಜಲೀಲ್ ಹತ್ಯೆ ಪ್ರಕರಣ; ಘಟನೆಯನ್ನು ಖಂಡಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ

spot_img
- Advertisement -
- Advertisement -

ಮಂಗಳೂರು: ಸುರತ್ಕಲ್ ಜಲೀಲ್ ಹತ್ಯೆ ಪ್ರಕರಣವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಖಂಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಾಜಘಾತುಕ ಶಕ್ತಿಗಳಿಂದ ನಡೆಯುತ್ತಿರುವಂತಹ  ಕೊಲೆ, ಹಲ್ಲೆಯ ಘಟನೆಗಳನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಪೊಲೀಸರು ಅಪರಾಧಿಗಳನ್ನು ಹಿಡಿದು ಉಗ್ರ ಶಿಕ್ಷೆಗೆ ಒಳಪಡಿಸಬೇಕು. ಯಾವುದೇ ಮುಲಾಜು ತೋರಿಸಬಾರದು ದ.ಕ ಜಿಲ್ಲೆ ಒಂದು ಶಾಂತಿಯ ತೋಟ,ಶಾಂತಿ ಸೌಹಾರ್ದತೆ ಸಹಬಾಳ್ವೆಯಂತಹ ಉದಾತ್ತ ಮಹೋನ್ನತ ಆದರ್ಶಗಳನ್ನು ಹೊಂದಿರುವ ಜಿಲ್ಲೆಯ ಗೌರವ ಉಳಿಯಬೇಕಾದಲ್ಲಿ ಪೊಲೀಸರು ತಕ್ಷಣ ಇಂತಹ ಕೃತ್ಯಗಳ ಹಿಂದೆ ಪ್ರೇರಣೆ ನೀಡುತ್ತಿರುವ  ಶಕ್ತಿಗಳನ್ನು ಮಟ್ಟಹಾಕಬೇಕು ಮತ್ತು ಕಾನೂನು ರೀತಿಯ ಕಠಿಣ ಶಿಕ್ಷೆಗಳಿಗೆ ಒಳಪಡಿಸಬೇಕು ಎಂದಿದ್ದಾರೆ.

ಇನ್ನು, ಯಾವುದೇ ಧರ್ಮವಾದರೂ ಹಿಂಸೆಯನ್ನು ಭೋಧಿಸುವುದಿಲ್ಲ ಇನ್ನಾದರೂ ಜಲೀಲ್ ಹತ್ಯೆಯ ಮೂಲಕ ತುಳುನಾಡಿನಲ್ಲಿ ಹತ್ಯಾಕಾಂಡಗಳು ಅಂತ್ಯವಾಗಲಿ ಕೊಲೆಗಡುಕರಿಗೆ ತಕ್ಷಣ ಉಗ್ರ ಶಿಕ್ಷೆಯಾಗಬೇಕೆಂದು ಆಗ್ರಹಿಸುತ್ತೇನೆ.ನಮ್ಮ ಜಿಲ್ಲೆಯ ಶಾಂತಿಪ್ರಿಯ ಜನರಲ್ಲಿ ಶಾಂತಿಯನ್ನು ಕಾಪಾಡಬೇಕೆಂದು ಮನವಿ ಮಾಡುತ್ತೇನೆ. ಈ ಹಿನ್ನೆಲೆಯಲ್ಲಿ ನಡೆಯುವ ಎಲ್ಲಾ ಶಾಂತಿಯುತ ಪ್ರತಿಭಟನೆಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ರಕ್ಷಿತ್ ಶಿವರಾಂ  ಹೇಳಿದ್ದಾರೆ.

- Advertisement -
spot_img

Latest News

error: Content is protected !!