Thursday, June 4, 2026
Homeಕರಾವಳಿ"ಭಾರತ್ ಜೋಡೋ" ಪಾದಯಾತ್ರೆಯ ಗುಂಡ್ಲುಪೇಟೆ ಮತ್ತು ವರುಣ ಕ್ಷೇತ್ರದ ಉಸ್ತುವಾರಿಯಾಗಿ ರಕ್ಷಿತ್ ಶಿವರಾಂ ನೇಮಕ

“ಭಾರತ್ ಜೋಡೋ” ಪಾದಯಾತ್ರೆಯ ಗುಂಡ್ಲುಪೇಟೆ ಮತ್ತು ವರುಣ ಕ್ಷೇತ್ರದ ಉಸ್ತುವಾರಿಯಾಗಿ ರಕ್ಷಿತ್ ಶಿವರಾಂ ನೇಮಕ

- Advertisement -
- Advertisement -

ಬೆಳ್ತಂಗಡಿ; ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಯುವ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ “ಭಾರತ್ ಜೋಡೋ” ಪಾದಯಾತ್ರೆ ಕಾರ್ಯಕ್ರಮದ ಗುಂಡ್ಲುಪೇಟೆ ಮತ್ತು ವರುಣ ಕ್ಷೇತ್ರದ ಉಸ್ತುವಾರಿಯಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರು ಕೆಪಿಸಿಸಿ ಯಿಂದ ನೇಮಕಗೊಂಡಿದ್ದಾರೆ.

12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಕವರ್ ಮಾಡಲು ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಪ್ರತಿದಿನ 6-7 ಗಂಟೆಗಳ ಕಾಲ ನಡೆಯಲಿದ್ದಾರೆ. ಎಲ್ಲಾ ರಾಜ್ಯ ಘಟಕಗಳ ಅಧ್ಯಕ್ಷರು ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ತಮ್ಮ ರಾಜ್ಯಗಳಲ್ಲಿ ‘ಭಾರತ್ ಜೋಡೋ ಯಾತ್ರೆ’ ನಡೆಸಲಿದ್ದಾರೆ. ಸುಮಾರು 150 ದಿನಗಳಲ್ಲಿ ಈ ಯಾತ್ರೆ ಪೂರ್ಣಗೊಳ್ಳಲಿದೆ.

- Advertisement -

Latest News

error: Content is protected !!