Monday, June 8, 2026
Homeಕರಾವಳಿಜೈನ ಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಭೀಕರ ಹತ್ಯೆಯ ಸುದ್ದಿ ದಿಗ್ಭ್ರಮೆ‌ ಮೂಡಿಸಿದೆ; ...

ಜೈನ ಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಭೀಕರ ಹತ್ಯೆಯ ಸುದ್ದಿ ದಿಗ್ಭ್ರಮೆ‌ ಮೂಡಿಸಿದೆ; ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿಕೆ

- Advertisement -
- Advertisement -

ಬೆಳ್ತಂಗಡಿ:-ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಭೀಕರ ಹತ್ಯೆಯ ಸುದ್ದಿ ದಿಗ್ಭ್ರಮೆ‌ ಮೂಡಿಸಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸಂತಾಪ ಸೂಚಿಸಿದ್ದಾರೆ.

ಪೊಲೀಸರು ಈಗಾಗಲೇ ಹಂತಕರನ್ನು ಬಂಧಿಸಿದ್ದು, ಸರಿಯಾದ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಿದ್ದಾರೆ!

ಸಾಧು ಸಂತರ ಮೇಲಿನ ಇಂತಹ ಕ್ರೌರ್ಯಗಳು‌ ನಿಜಕ್ಕೂ ಕಳವಳಕಾರಿ. ಆಘಾತದಲ್ಲಿರುವ ಸಮಸ್ತ ಜೈನ ಸಮುದಾಯದ ನೋವಿನಲ್ಲಿ ನಾವೆಲ್ಲ ಭಾಗಿ ಎಂದಿದ್ದಾರೆ.

- Advertisement -

Latest News

error: Content is protected !!