Thursday, June 4, 2026
Homeಕರಾವಳಿಮಾಣಿ ಗ್ರಾಮ ಪಂಚಾಯತ್ ಕಛೇರಿಯಲ್ಲಿ ರಕ್ಷಾ ಬಂಧನ ಕಾರ್ಯಕ್ರಮ!

ಮಾಣಿ ಗ್ರಾಮ ಪಂಚಾಯತ್ ಕಛೇರಿಯಲ್ಲಿ ರಕ್ಷಾ ಬಂಧನ ಕಾರ್ಯಕ್ರಮ!

- Advertisement -
- Advertisement -

ಮಾಣಿ: ಮಾಣಿ ಗ್ರಾಮ ಪಂಚಾಯತ್ ಕಛೇರಿಯಲ್ಲಿ ನೂತನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರನ್ನು ಸ್ವಾಗತಿಸುವುದರೊಂದಿಗೆ ರಕ್ಷಾ ಬಂಧನ ಕಾರ್ಯಕ್ರಮವನ್ನೂ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆಯವರು, ರಕ್ಷಾ ಬಂಧನ ಎನ್ನುವುದು ಪ್ರೀತಿ, ವಾತ್ಸಲ್ಯ, ಮಮಕಾರ ಮತ್ತು ಸಾಮರಸ್ಯ ಹಾಗೂ ಸಹೋದರತೆಯ ಸಂಕೇತ. ಎಲ್ಲರೂ ಒಬ್ಬರಿಗೊಬ್ಬರು ತಿಳಿದು ಅರ್ಥೈಸಿಕೊಂಡು ಜೀವಿಸಿದಾಗ ಸಮಾಜದಲ್ಲಿ ಬಾಂಧವ್ಯ ವೃದ್ಧಿಯಾಗಲು ಸಾಧ್ಯ ಎಂದು ಹೇಳಿದರು.

ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷೆ, ಸದಸ್ಯರು, ಅಭಿವೃದ್ಧಿ ಅಧಿಕಾರಿಯವರು ಮತ್ತು ಪಂಚಾಯತ್ ಸಿಬ್ಬಂದಿಯವರು ರಕ್ಷೆ ಕಟ್ಟಿಕೊಳ್ಳುವ ಮೂಲಕ ರಕ್ಷಾ ಬಂಧನ ಆಚರಿಸಿದರು.ಪಂಚಾಯತ್ ಗೆ ನೂತನವಾಗಿ ವರ್ಗಾವಣೆಗೊಂಡು ಬಂದಿರುವ ಪಿಡಿಒ ಶ್ರೀಮತಿ ಗಿರಿಜರವರನ್ನು ಸ್ವಾಗತಿಸಲಾಯಿತು.

ಪಂಚಾಯತ್ ಉಪಾಧ್ಯಕ್ಷೆ ಪ್ರೀತಿ ಡಿನ್ನಾ ಪಿರೇರಾ, ಸದಸ್ಯರುಗಳಾದ ಇಬ್ರಾಹಿಂ.ಕೆ.ಮಾಣಿ, ಮೆಲ್ವಿನ್ ಕಿಶೋರ್ ಮಾರ್ಟಿಸ್, ರಮಣಿ.ಡಿ.ಪೂಜಾರಿ ಉಪಸ್ಥಿತರಿದ್ದರು. ಪಿಡಿಒ ನಾರಾಯಣ ಗಟ್ಟಿ ಸ್ವಾಗತಿಸಿದರು.

- Advertisement -

Latest News

error: Content is protected !!