Saturday, August 29, 2026
Homeತಾಜಾ ಸುದ್ದಿಮುರಿದಾ ಬಿತ್ತಾ ರಾಖಿ ಸಾವಂತ್‌ – ಆದಿಲ್‌ ಮದುವೆ? ಮದುವೆ ಸುದ್ದಿಯನ್ನು ಆದಿಲ್‌ ನಿರಾಕರಿಸಿದ್ದೇಕೆ?

ಮುರಿದಾ ಬಿತ್ತಾ ರಾಖಿ ಸಾವಂತ್‌ – ಆದಿಲ್‌ ಮದುವೆ? ಮದುವೆ ಸುದ್ದಿಯನ್ನು ಆದಿಲ್‌ ನಿರಾಕರಿಸಿದ್ದೇಕೆ?

- Advertisement -
- Advertisement -

ನಟಿ ರಾಖಿ ಸಾವಂತ್ ತಮ್ಮ ಬಹುಕಾಲದ ಪ್ರೇಮಿ ಆದಿಲ್ ಖಾನ್ ದುರಾನಿ ಅವರನ್ನು ಮದುವೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ,  ಆದಿಲ್ ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ.‌ ಅಲ್ಲದೇ ಆದಿಲ್‌ ಖಾನ್‌ ಮದುವೆಯಾಗಿ ಮೋಸ ಮಾಡ್ತಿದ್ದಾನೆ ಎಂದು ರಾಖಿ ಸಾವಂತ್‌ ಅಳಲು ತೋಡಿಕೊಂಡಿದ್ದಾರೆ.

ಆರು ತಿಂಗಳ ಹಿಂದೆಯಷ್ಟೇ ರಾಖಿ ಸಾವಂತ್ ಮತ್ತು ಮೈಸೂರು ಹುಡುಗ ಆದಿಲ್ ಖಾನ್ ರಿಜಿಸ್ಟರ್ ಮದುವೆ ಆಗಿದ್ದಾರೆ. ಆದರೆ, ಇದೀಗ ತಮ್ಮ ಮದುವೆಯೇ ಆಗಿಲ್ಲ ಎಂದು ಆದಿಲ್ ಹೇಳುತ್ತಿದ್ದಾನೆ ಎನ್ನುತ್ತಾರೆ ರಾಖಿ. ಮದುವೆ ಆಗಿದ್ದರ ಗುರುತಾಗಿ ರಿಜಿಸ್ಟರ್ ಪತ್ರಗಳನ್ನೂ ಅವರು ಬಹಿರಂಗ ಪಡಿಸಿದ್ದಾರೆ.

ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಮಾಹಿತಿ ನೀಡಿರುವ ರಾಖಿ, ‘ಆರು ತಿಂಗಳ ಹಿಂದೆಯೇ ನಾವಿಬ್ಬರೂ ಮದುವೆ ಆಗಿದ್ದೇವೆ. ತಮ್ಮ ತಂಗಿಯ ಮದುವೆ ಆಗೋವರೆಗೂ ಈ ವಿಷಯವನ್ನು ಯಾರಿಗೂ ಹೇಳಬೇಡಿ ಎಂದು ಆದಿಲ್ ಹೇಳಿದ್ದ. ಹಾಗಾಗಿ ಸುಮ್ಮನಿದ್ದೆ. ಆದಿಲ್ ಮನೆಯವರೆಗೆ ನಾನು ಅಂದರೆ ಇಷ್ಟವಿಲ್ಲ. ಹಾಗಾಗಿ ಅವರೂ ಅಡ್ಡಿ ಪಡಿಸುತ್ತಿದ್ದಾರೆ. ಆದಿಲ್ ಇಷ್ಟದಂತೆ ನಾನು ಫಾತಿಮಾ ಆಗಿಯೂ ಬದಲಾಗಿದ್ದೆ. ಇಷ್ಟೆಲ್ಲ ಹೊಂದಾಣಿಕೆ ಮಾಡಿಕೊಂಡರೂ, ಅವನು ನನಗೆ ಮೋಸ ಮಾಡುತ್ತಿದ್ದಾನೆ’ ಎಂದು ರಾಖಿ ಹೇಳಿಕೊಂಡಿದ್ದಾರೆ.

- Advertisement -

Latest News

error: Content is protected !!