Sunday, May 5, 2024
Homeಕರಾವಳಿಬಿಜೆಪಿಯಿಂದ ರಾಜ್ಯಸಭೆಗೆ ಅಭ್ಯಥಿಗಳ ಹೆಸರು ಫೈನಲ್: ರಮೇಶ್ ಕತ್ತಿ, ಪ್ರಭಾಕರ್ ಕೋರೆ, ಪ್ರಕಾಶ್ ಶೆಟ್ಟಿಗೆ...

ಬಿಜೆಪಿಯಿಂದ ರಾಜ್ಯಸಭೆಗೆ ಅಭ್ಯಥಿಗಳ ಹೆಸರು ಫೈನಲ್: ರಮೇಶ್ ಕತ್ತಿ, ಪ್ರಭಾಕರ್ ಕೋರೆ, ಪ್ರಕಾಶ್ ಶೆಟ್ಟಿಗೆ ಅವಕಾಶ

spot_img
- Advertisement -
- Advertisement -

ಬೆಂಗಳೂರು : ಜೂನ್ 18ರಂದು ನಡೆಯಲಿರುವ ರಾಜ್ಯಸಭೆಯ ಚುನಾವಣೆಗೆ ರಾಜ್ಯ ಬಿಜೆಪಿಯ ಕೋರ್ ಕಮಿಟಿ ಮೂರು ಹೆಸರುಗಳನ್ನು ಫೈನಲ್ ಮಾಡಿದೆ. ಬಿಜೆಪಿಯಿಂದ ರಮೇಶ್ ಕತ್ತಿ, ಪ್ರಭಾಕರ್ ಕೋರೆ ಹಾಗೂ ಮಂಗಳೂರಿನ ಉದ್ಯಮಿ ಪ್ರಕಾಶ್ ಶೆಟ್ಟಿಗೆ ಟಿಕೆಟ್ ಫೈನಲ್ ಮಾಡಲಾಗಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆದ ರಾಜ್ಯ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದು, ರಮೇಶ್ ಕತ್ತಿ, ಪ್ರಭಾಕರ್ ಕೋರೆ ಮತ್ತು ಪ್ರಕಾಶ್ ಶೆಟ್ಟಿಗೆ ಟಿಕೆಟ್ ನೀಡಿ ಅಭ್ಯರ್ಥಿಗಳನ್ನಾಗಿ ಘೋಷಣೆ ಮಾಡಿದೆ.

ಕರ್ನಾಟಕದ 4 ಸ್ಥಾನಗಳಿಗೆ ಈಗಾಗಲೇ ಜೆಡಿಎಸ್ ನಿಂದ ಹೆಚ್ ಡಿ ದೇವೇಗೌಡರು, ಕಾಂಗ್ರೆಸ್ ನಿಂದ ಮಲ್ಲಿಕಾರ್ಜುನ ಖರ್ಗೆ ಗೆಗೆ ಟಿಕೆಟ್ ಫೈನಲ್ ಮಾಡಲಾಗಿದೆ.

ಕೊರಂಗ್ರಪಾಡಿ ಪ್ರಕಾಶ್‌ ಶೆಟ್ಟಿ

ಅಂದಹಾಗೇ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿಗೆ ರಾಜ್ಯ ಸಭಾ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದರು. ಅಲ್ಲದೇ ಬಂಡಾಯದ ಬಿಸಿಯನ್ನು ಕೂಡ ರಾಜ್ಯ ಬಿಜೆಪಿ ಸರ್ಕಾರಕ್ಕೆ ಮುಟ್ಟಿಸಿದ್ದರು. ಈ ಹಿನ್ನಲೆಯಲ್ಲಿ ರಮೇಶ್ ಕತ್ತಿಗೆ ಟಿಕೆಟ್ ನೀಡಲಾಗಿದೆ. ಇನ್ನೂ 2ನೇ ಬಾರಿ ಪ್ರಭಾಕರ್ ಕೋರೆ ಆಯ್ಕೆ ಬಯಸಿದ್ದರಿಂದ ಅವರಿಗೂ ಟಿಕೆಟ್ ನೀಡಲಾಗಿದೆ.

ಎಂಆರ್‌ಜಿ ಗ್ರೂಪ್‌ನ ಅಧ್ಯಕ್ಷ, ಕೊರಂಗ್ರಪಾಡಿ ಪ್ರಕಾಶ್‌ ಶೆಟ್ಟಿ ಮಂಗಳೂರಿನ ಖ್ಯಾತ ಹೋಟೆಲ್ ಗಳಲ್ಲಿ ಒಂದಾದ ಗೋಲ್ಡ್ ಫಿಂಚ್ ನ ಮಾಲೀಕರು. ಕಳೆದ ಡಿಸೆಂಬರ್ ನಲ್ಲಿ ಇವರಿಗೆ 60 ವರುಷ ತುಂಬಿದ ಸಂಭ್ರಮಕ್ಕೆ ಅಭಿಮಾನಿಗಳ ನೇತೃತ್ವದಲ್ಲಿ ಮಂಗಳೂರಿನಲ್ಲಿ “ಪ್ರಕಾಶಭಿನಂದನ-60ರ ಸಂಭ್ರಮ” ಎಂಬ ಕಾರ್ಯಕ್ರಮ ನಡೆದಿತ್ತು

ಅವಕಾಶ ವಂಚಿತ ತೇಜಸ್ವಿನಿ ಅನಂತಕುಮಾರ್

ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ದಿಸಲು ಬಿಜೆಪಿ ಅವಕಾಶ ನೀಡಿರಲಿಲ್ಲ. ಆದರೆ ಅವರಿಗೆ ರಾಜ್ಯಸಭೆಯ ಭರವಸೆ ನೀಡಿ ಯುವನಾಯಕ ತೇಜಸ್ವಿ ಸೂರ್ಯರಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೆತ್ರದಿಂದ ಟಿಕೆಟ್ ನೀಡಿ ಸಂಸದನಾಗಿ ಆಯ್ಕೆ ಮಾಡಲಾಗಿತ್ತು.

ಆದರೆ ಈ ಬಾರಿಯ ರಾಜ್ಯಸಭಾ ಟಿಕೆಟ್ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದ ತೇಜಸ್ವಿನಿ ಅನಂತ್ ಕುಮಾರ್ ಗೆ ಪಕ್ಷದ ಒಳಮರ್ಮ ಅರ್ಥವಾಗದೆ ಈ ಭಾರಿಯೂ ರಾಜ್ಯಸಭಾಗೆ ಸ್ಪರ್ದಿಸುವ ಅವಕಾಶದಿಂದ ವಂಚಿತರಾಗಿದ್ದಾರೆ.

- Advertisement -
spot_img

Latest News

error: Content is protected !!