Friday, May 3, 2024
Homeಕರಾವಳಿಬಂಟ್ವಾಳ; ರಸ್ತೆ ಕಾಮಗಾರಿಯ ಗುಣಮಟ್ಟದ ಬಗ್ಗೆ ಗ್ರಾಮಸ್ಥರಿಗೆ ಸಂದೇಹ; ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲು ಡಿಸಿ ಹಾಗೂ...

ಬಂಟ್ವಾಳ; ರಸ್ತೆ ಕಾಮಗಾರಿಯ ಗುಣಮಟ್ಟದ ಬಗ್ಗೆ ಗ್ರಾಮಸ್ಥರಿಗೆ ಸಂದೇಹ; ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲು ಡಿಸಿ ಹಾಗೂ ಜಿ.ಪಂ.ಇಂಜಿನಿಯರಿಂಗ್ ಗೆ ಶಾಸಕ ರಾಜೇಶ್ ನಾಯ್ಕ್ ಸೂಚನೆ

spot_img
- Advertisement -
- Advertisement -

ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಸರಪಾಡಿ – ಪೆರಿಯಪಾದೆ – ಅರಸೋಲಿಗೆ ರಸ್ತೆಗೆ  ಡಾಮರೀಕರಣ ತೇಪೆ ಕಾರ್ಯದ  ಪರಿಶೀಲನೆ ನಡೆಸಿ ವರದಿ ನೀಡಿ ಎಂದು ಬಂಟ್ವಾಳ ‌ಶಾಸಕ ರಾಜೇಶ್ ನಾಯ್ಕ್ ಅವರು ಜಿಲ್ಲಾಧಿಕಾರಿ ಹಾಗೂ ಜಿ.ಪಂ.ಇಂಜಿನಿಯರಿಂಗ್ ವಿಭಾಗಕ್ಕೆ ಸೂಚನೆ ‌ನೀಡಿದ್ದಾರೆ.

  ಸರಪಾಡಿ-ಪೆರಿಪಾದೆ- ಅರಸೋಲಿಗೆ ರಸ್ತೆಗೆ ಜಿ.ಪಂ.ಟಾಸ್ಕ್ ಪೋರ್ಸ್ ನ ಮೂಲಕ 5 ಲಕ್ಷ ಅನುದಾನವನ್ನು ತೇಪೆ  ಕಾರ್ಯಕ್ಕಾಗಿ ಮಂಜೂರುಗೊಳಿಸಲಾಗಿತ್ತು .  ಫೆ.8 ರಂದು ಗುರುವಾರ ಈ ರಸ್ತೆಗೆ ಡಾಮರೀಕರಣದ ತೇಪೆ ಕಾರ್ಯ ಮಾಡಲಾಗಿತ್ತು.   ಆದರೆ ಇದರ ಗುಣಮಟ್ಟದ ಬಗ್ಗೆ ಇಲ್ಲಿನ ಗ್ರಾಮಸ್ಥರಿಗೆ ಸಂಶಯ ಬಂದಿದ್ದು, ಬಂಟ್ವಾಳ ಶಾಸಕರಿಗೆ ದೂರು ನೀಡಿದ್ದರು ‌

 ದೂರಿನ ಹಿನ್ನೆಲೆಯಲ್ಲಿ ಶಾಸಕರು , ಜಿಲ್ಲಾಧಿಕಾರಿ ಹಾಗೂ ಜಿ.ಪಂ.ಇಂಜಿನಿಯರಿಂಗ್ ವಿಭಾಗಕ್ಕೆ ಈ ರಸ್ತೆಯನ್ನು ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದಲ್ಲದೆ, ಗುಣಮಟ್ಟದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಗುತ್ತಿಗೆದಾರರನ ಮೇಲೆ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!