- Advertisement -
- Advertisement -
ಬೆಳ್ತಂಗಡಿ : ಸಮಾಜ ಸೇವೆಯಲ್ಲಿ ನಿರಂತರ ತನ್ನನ್ನು ತಾನು ತೊಡಗಿಸಿಕೊಂಡಿರುವ ರಾಜ ಕೇಸರಿ ಬಸವನ ಬೈಲು ನೆಲ್ಲಿಗುಡ್ಡೆ ಇದರ ಆಶ್ರಯದಲ್ಲಿ ,ರಾಜ ಕೇಸರಿ ಸಂಸ್ಥೆಯ ಸಂಸ್ಥಾಪಕ ದೀಪಕ್ ಜಿ ಅವರ ನೇತೃತ್ವದಲ್ಲಿ ರಾಜ ಕೇಸರಿ ಬಸವನ ಬೈಲು ನೆಲ್ಲಿಗುಡ್ಡೆ ಇದರ ಅಧ್ಯಕ್ಷ ಪ್ರಸಾದ್ ಕುಲಾಲ್ ಅವರ ಮುಂದಾಳತ್ವದಲ್ಲಿ ಬಸವನ ಬೈಲು ನೆಲ್ಲಿಗುಡ್ಡೆ ಪರಿಸರದ 42 ಜನರಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ರಾಜ ಕೇಸರಿ ಬಸವನ ಬೈಲು ಇದರ ಸಂಚಾಲಕ ಸಂದೇಶ ಶೆಟ್ಟಿ, ಕಾರ್ಯದರ್ಶಿ ಶೇಖರ್ ಕುಲಾಲ್ ಕೋಶಾಧಿಕಾರಿ ಗೌತಮ್ ಪೂಜಾರಿ, ಸದಸ್ಯರಾದ ಮಂಜು ಕುಲಾಲ್, ಹೇಮಾನಂದ, ಪುರುಷೋತ್ತಮ್ ಪೂಜಾರಿ, ಹರೀಶ್ ನೆಲ್ಲಿಗುಡ್ಡೆ, ದಯಾನಂದ ನಾಯ್ಕ, ರವಿರಾಜ್ ನಾಯ್ಕ್, ಆನಂದ್ ಕುಲಾಲ್, ಪ್ರದೀಪ್ ಪೂಜಾರಿ ಸುರೇಶ್ ಸಪಲ್ಯ ಇವರುಗಳೆಲ್ಲಾ ಉಪಸ್ಥಿತರಿದ್ದರು
- Advertisement -