- Advertisement -
![]()
- Advertisement -
ಬೆಳ್ತಂಗಡಿಯ ಜನತೆ ಮತ್ತು ನ್ಯಾಯವಾದಿಗಳ ಬಹು ದಿನಗಳ ಬೇಡಿಕೆಯಾಗಿದ್ದ ಹೊಸ ನ್ಯಾಯಾಲಯ ಸಂಕೀರ್ಣದ ಮೊದಲ ಹಂತದ ಕಾಮಗಾರಿಗೆ ಸರಕಾರ ರೂ 9 ಕೋಟಿ ಮಂಜೂರುಗೊಳಿಸಿದ್ದು ಸದ್ರಿ ಕಾಮಗಾರಿಯ ಕುರಿತಾದ ಪೂರಕ ಕಾರ್ಯಗಳ ಬಗ್ಗೆ ಇಂದು ಮಂಗಳೂರಿನಲ್ಲಿ ವಿಧಾನ ಪರಿಷತ್ ಶಾಸಕರಾದ ಐವನ್ ಡಿ ಸೋಜಾ ರವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಾದ ವಸಂತ ಮರಕಡ,ಅಪರ ಸರ್ಕಾರಿ ವಕೀಲರಾದ ಮನೋಹರ ಕುಮಾರ್ ಎ, ಹಿರಿಯ ಸಮಿತಿ ಚೇರ್ಮನ್ ಅಲೋಶಿಯಸ್ ಎಸ್ ಲೋಬೊ, ಮಾಜಿ ಅಧ್ಯಕ್ಷರಾದ ಶಶಿಕಿರಣ್ ಜೈನ್ ಮತ್ತು ಕೋಶಾಧಿಕಾರಿ ಪ್ರಶಾಂತ್ ಎಮ್ ಉಪಸ್ಥಿತರಿದ್ದರು.
- Advertisement -


