Wednesday, July 2, 2025
Homeಕರಾವಳಿಉಡುಪಿಕರಾವಳಿಯ ಹಲವೆಡೆ ವರುಣನ ಆರ್ಭಟ: ಕೆಲವೆಡೆ ಆಸ್ತಿ-ಪಾಸ್ತಿಗಳಿಗೆ ಹಾನಿ

ಕರಾವಳಿಯ ಹಲವೆಡೆ ವರುಣನ ಆರ್ಭಟ: ಕೆಲವೆಡೆ ಆಸ್ತಿ-ಪಾಸ್ತಿಗಳಿಗೆ ಹಾನಿ

spot_img
- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೆಲವು ಭಾಗಗಳಲ್ಲಿ ನಿನ್ನೆ ಮಳೆ ಸುರಿದಿದ್ದು ಮಳೆಯಿಂದಾಗಿ ಕೆಲವೆಡೆ ಆಸ್ತಿ ಪಾಸ್ತಿಗಳಿಗೆ ಹಾನಿ ಉಂಟಾಗಿದೆ.  ದ.ಕ. ಜಿಲ್ಲೆಯ ಶಿಬಾಜೆಯಲ್ಲಿ ಮನೆಯ ಮೇಲೆ ತೆಂಗಿನ ಮರ ಬಿದ್ದು ಶೀಟ್‌ ಹಾಗೂ  ಜೀಪಿಗೆ ಹಾನಿಯಾಗಿದೆ. ಬೆಳ್ತಂಗಡಿ ತಾಲೂಕಿನಾದ್ಯಂತ ಸುಮಾರು ಅರ್ಧ ಗಂಟೆ ಕಾಲ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಧರ್ಮಸ್ಥಳ,

ಮಡಂತ್ಯಾರು, ಉಜಿರೆ, ಮುಂಡಾಜೆ, ಕೊಕ್ಕಡ, ಅರಸಿನಮಕ್ಕಿ, ಶಿಬಾಜೆ, ನಾರಾವಿ, ಅಳದಂಗಡಿ, ಮದ್ದಡ್ಕ, ಮುಂತಾದ ಕಡೆ ಅರ್ಧ ಅರ್ಧಗಂಟೆಗೂ ಹೆಚ್ಚು ಮಳೆಯಾಗಿದೆ. ಇನ್ನು ಮೂಡಬಿದಿರೆ ಮತ್ತು ಕಿನ್ನಿಗೋಳಿ ಹಾಗೂ ಸುಬ್ರಹ್ಮಣ್ಯ, ಪಂಜ, ಕಲ್ಮಡ್ಕ ಪ್ರದೇಶಗಳಲ್ಲಿ ಗುಡುಗು ಸಹಿತ ಹನಿ ಮಳೆಯಾಗಿದೆ. ಉಳಿದಂತೆ ಜಿಲ್ಲೆಯ ಮಂಗಳೂರು, ಬಂಟ್ವಾಳ , ಉಳ್ಳಾಲ, ಮೂಲ್ಕಿ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಕಂಡು ಬಂತು.

ಅತ್ತ ಉಡುಪಿ ಜಿಲ್ಲೆಯ ಮಣಿಪಾಲ, ನಾಲ್ಕೂರು, ಕೊಕ್ಕರ್ಣೆ, ಕೆಂಜೂರು, ಪರ್ಕಳ, ಬೆಳ್ವೆ, ಕೋಟ, ಗೋಳಿಯಂಗಡಿ, ಆರ್ಡಿ, ಹೆಬ್ರಿ, ಹಿರಿಯಡ್ಕ, ಕಾರ್ಕಳ ಮೊದಲಾದ ಪ್ರದೇಶಗಳಲ್ಲಿ ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣವಿದ್ದು ಸಾಯಂಕಾಲ ಸಾಧಾರಣ ಮಳೆಯಾಗಿದೆ.

ಮುಂದಿನ 48 ಗಂಟೆಗಳ ಅವಧಿ ಯಲ್ಲಿ ಅಂದರೆ ಮಾ. 20 ರ ತನಕವೂ ಕರಾವಳಿಯ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

- Advertisement -
spot_img

Latest News

error: Content is protected !!