Sunday, June 7, 2026
Homeಉತ್ತರ ಕನ್ನಡಮಳೆಯಿಂದಾಗಿ ಶಿರಸಿ ಮಾರಿಕಾಂಬಾ ಜಾತ್ರೆಗೆ ಅಡ್ಡಿ

ಮಳೆಯಿಂದಾಗಿ ಶಿರಸಿ ಮಾರಿಕಾಂಬಾ ಜಾತ್ರೆಗೆ ಅಡ್ಡಿ

- Advertisement -
- Advertisement -

ಶಿರಸಿ: ಶಿರಸಿಯಲ್ಲಿ ಗುಡುಗು ಮತ್ತು ಗಾಳಿ ಸಹಿತ ಭಾರೀ ಮಳೆಯಿಂದಾಗಿ ಮಾರಿಕಾಂಬಾ ಜಾತ್ರೆಗೆ ಅಡ್ಡಿ ಉಂಟಾಗಿದೆ. ಭಾರೀ ಗಾಳಿಯಿಂದಾಗಿ ಹಾರಿ ಜಾತ್ರಾ ಅಂಗಡಿಯ ಮೇಲ್ಛಾವಣಿಗಳು ಹಾರಿ ಹೋಗಿವೆ.

ಗಾಳಿ ಮತ್ತು ಮಳೆಯಿಂದ ರಕ್ಷಣೆ ಪಡೆದುಕೊಳ್ಳಲು ಜಾತ್ರೆಗೆ ಬಂದ ಭಕ್ತರು ಹರಸಾಹಸಪಡುವಂತಾಗಿದ್ದು ಒಂದು ತಾಸು ಎಡಬಿಡದೆ ಗಾಳಿ ಸಹಿತ ಮಳೆ ಸುರಿದಿದೆ. ಗಾಳಿಯಿಂದಾಗಿ ಹಲವು ಕಡೆಯಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಶಿರಸಿ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ವ್ಯಾಪಕ ಮಳೆಯಾಗಿದೆ.

ಇನ್ನು ಗಾಳಿ ಮಳೆಗೆ ಮಾರಿಕಾಂಬೆಯನ್ನು ಇರಿಸಿರುವ ಜಾತ್ರಾ ಗದ್ದುಗೆಯ ಚಪ್ಪರದ ಮೇಲ್ಭಾಗಕ್ಕೆ ಹಾನಿ ಉಂಟಾಗಿದ್ದು ಜಾತ್ರೆಯಲ್ಲಿ ಅಂಗಡಿ-ಮುಂಗಟ್ಟುಗಳಿಗೆ ಹಾನಿಯಾಗಿದೆ. ಶಿರಸಿಯ ಕೆಲವೆಡೆ ಮಳೆ ತಂಪು ತಂದರೆ, ಮತ್ತೊಂದೆಡೆ ಅವಾಂತರ ಸೃಷ್ಟಿಸಿದೆ. ಇದರ ಮಧ್ಯೆ
ಜಾತ್ರೆಗೆ ಬಂದ ಭಕ್ತರು ಮಳೆಗೆ ಹೈರಾಣಾಗಿದ್ದಾರೆ.‌

- Advertisement -

Latest News

error: Content is protected !!