Monday, June 8, 2026
Homeಕರಾವಳಿಮಂಗಳೂರು ನಗರದಲ್ಲಿ ಮಳೆ ಅವಾಂತರ: ಹಲವೆಡೆ ಮನೆಗಳಿಗೆ ನುಗ್ಗಿದ ನೀರು

ಮಂಗಳೂರು ನಗರದಲ್ಲಿ ಮಳೆ ಅವಾಂತರ: ಹಲವೆಡೆ ಮನೆಗಳಿಗೆ ನುಗ್ಗಿದ ನೀರು

- Advertisement -
- Advertisement -

ಮಂಗಳೂರು: ನಿನ್ನೆ ರಾತ್ರಿಯಿಂದ ಸುರಿದ ಧಾರಾಕಾರ ಮಳೆ‌ಯ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಹಲವು ತಗ್ಗು ಪ್ರದೇಶಗಳು ಜಲಾವೃತ‌ಗೊಂಡಿವೆ‌‌.

ಕೊಟ್ಟಾರ ಚೌಕಿ, ಮಾಲೆಮಾರು ಬಳಿ ರಸ್ತೆ ಮೇಲೆ ನೀರು ಹರಿದಿದ್ದು, ದೇರೆಬೈಲು ಸೇರಿದಂತೆ ಕೆಲವೆಡೆ ನೀರು ನುಗ್ಗಿದೆ. ರಸ್ತೆಗಳು ಸಂಪೂರ್ಣ ನೀರಿನಿಂದ ತುಂಬಿದ್ದು,  ಮನೆಗಳಿಗೆ ನೀರು ನುಗ್ಗಿ ಅವಾಂತರ ಸಂಭವಿಸಿದೆ.

ಪಚ್ಚನಾಡಿ ಬಂದಲೆಯಲ್ಲಿ ವಸತಿ ಪ್ರದೇಶಕ್ಕೆ ನೀರು ನುಗ್ಗಿದ್ದು, ಪಡೀಲ್ ಬಳಿ ಮನೆಗಳಿಗೆ ನೀರು ತುಂಬಿದೆ. ರಾಜ ಕಾಲುವೆ ಸರಿ ಮಾಡಿಲ್ಲ ಮತ್ತು  ಜನಪ್ರತಿನಿಧಿಗಳು ಈವರೆಗೂ ಭೇಟಿ ನೀಡಿಲ್ಲ ಎಂದು ಸ್ಥಳೀಯರಿಂದ ಅಸಮಾಧಾನ ವ್ಯಕ್ತವಾಗಿದೆ

- Advertisement -

Latest News

error: Content is protected !!