Friday, March 29, 2024
Homeಉದ್ಯಮ200 ರೈಲುಗಳ ಸಂಚಾರಕ್ಕೆ ಕೇಂದ್ರ ಸರ್ಕಾರದ ಗ್ರೀನ್ ಸಿಗ್ನಲ್

200 ರೈಲುಗಳ ಸಂಚಾರಕ್ಕೆ ಕೇಂದ್ರ ಸರ್ಕಾರದ ಗ್ರೀನ್ ಸಿಗ್ನಲ್

spot_img
- Advertisement -
- Advertisement -

ನಾಲ್ಕನೆ ಹಂತದ ಲಾಕ್ ಡೌನ್ ಜಾರಿ ಸಂದರ್ಭದಲ್ಲಿ ಸಾಕಷ್ಟು ಸಡಿಲಿಕೆಗಳನ್ನು ಮಾಡಿರುವ ಕೇಂದ್ರ ಸರ್ಕಾರ ಇದೀಗ ರೈಲು ಸಂಚಾರದ ಕುರಿತು ಮತ್ತೊಂದು ಮಹತ್ವದ ತೀರ್ಮಾನ ಮಾಡಿದೆ. ಜೂನ್ 1 ರಿಂದ 200 ನಾನ್ ಎಸಿ ಹಾಗೂ ದ್ವಿತೀಯ ದರ್ಜೆ ಪ್ಯಾಸೆಂಜರ್ ಟ್ರೈನ್ ಆರಂಭಿಸಲು ತೀರ್ಮಾನಿಸಲಾಗಿದೆ.

ರೈಲ್ವೆ ಸಚಿವ ಪಿಯುಷ್ ಗೊಯಲ್ ಈ ಕುರಿತು ಟ್ವೀಟ್ ಮಾಡುವ ಮೂಲಕ ಘೋಷಣೆ ಮಾಡಿದ್ದು, ಈ ರೈಲುಗಳು ಪ್ರಮುಖ ನಗರಗಳಿಂದ ಸಂಚರಿಸಲಿವೆ ಎಂದು ಹೇಳಲಾಗಿದೆ. ಈ ರೈಲುಗಳ ಸಂಚಾರದಿಂದ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಅನುಕೂಲವಾಗುತ್ತದೆ ಎಂದು ರೈಲ್ವೆ ಇಲಾಖೆ ಹೇಳಿದೆ.

ರೈಲ್ವೆ ಇಲಾಖೆ ಈಗ ಶ್ರಮಿಕ್ ಹಾಗೂ ವಿಶೇಷ ರೈಲುಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಿದ್ದು, ಜೂನ್ 1 ರಿಂದ ಹವಾನಿಯಂತ್ರಣ ಹೊಂದಿರುವ ರೈಲುಗಳನ್ನು ಹೊರತುಪಡಿಸಿ ಬಹುತೇಕ ಉಳಿದ ರೈಲುಗಳು ಸಂಚಾರ ಆರಂಭಿಸಲಿವೆ. ವಿಮಾನ ಹಾರಾಟಕ್ಕೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ಸಮ್ಮತಿ ಸೂಚಿಸುವ ಸಾಧ್ಯತೆ ಇದೆ.

- Advertisement -
spot_img

Latest News

error: Content is protected !!