ಕೊರೊನಾ ವೈರಸ್ ನಿಯಂತ್ರಣಕ್ಕೆ ಭಾರತದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಪ್ರಯಾಣಿಕರ ರೈಲು ಸೇವೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಸಾಮಾನ್ಯ ಜನರಿಗೆ ರೈಲು ಸೇವೆ ಮುಚ್ಚಿದ ನಂತರವೂ ಭಾರತೀಯ ರೈಲ್ವೆ ಉತ್ತಮವಾಗಿ ಗಳಿಸುತ್ತಿದೆ. ಲಾಕ್‌ಡೌನ್ ಸಮಯದಲ್ಲಿ ಪ್ರಯಾಣಿಕರ ರೈಲು ಸೇವೆಗಳನ್ನು ಮುಚ್ಚಲಾಗುತ್ತದೆ. ಆದರೆ ಪಾರ್ಸೆಲ್ ರೈಲುಗಳು ಇನ್ನೂ ಚಾಲನೆಯಲ್ಲಿವೆ.
ಲಾಕ್ ಡೌನ್ ಸಮಯದಲ್ಲಿ ಅನೇಕ ಅಗತ್ಯ ಸರಕು ಮತ್ತು ವೈದ್ಯಕೀಯ ಸಾರಿಗೆ ಕೆಲಸಗಳು ನಡೆಯುತ್ತಿವೆ. ಇದರಲ್ಲಿ ವೈದ್ಯಕೀಯ ಸರಬರಾಜು, ಆಹಾರ, ತೈಲ, ಡೈರಿ ಉತ್ಪನ್ನಗಳ ಸಾಗಣೆಯಿಂದ ರೈಲ್ವೆ ಗಳಿಸುತ್ತಿದೆ. ಮೊದಲ ಹಂತದ ಲಾಕ್‌ಡೌನ್ ಅವಧಿಯಲ್ಲಿ ರೈಲ್ವೆ ಇದುವರೆಗೆ ಪಾರ್ಸೆಲ್ ರೈಲುಗಳಿಂದ 7 ಕೋಟಿ ರೂಪಾಯಿ ಗಳಿಸುತ್ತಿದೆ.
ರೈಲ್ವೆ ತಡೆರಹಿತ ಪೂರೈಕೆಗಾಗಿ ವಿಶೇಷ ಸಮಯ ಕೋಷ್ಟಕವನ್ನು ಸಿದ್ಧಪಡಿಸಿದೆ. ಅದರ ಅಡಿಯಲ್ಲಿ ಈ ಸರಕುಗಳನ್ನು ಸಾಗಿಸಲಾಗುತ್ತಿದೆ.
2 ಕಿ.ಮೀ. ಉದ್ದದ ‘ಅನಕೊಂಡಾ’ ಗೂಡ್ಸ್ ರೈಲು ಸಂಚಾರ ಯಶಸ್ವಿ!
2 ಕಿ.ಮೀ. ಉದ್ದದ ಸರಕು ಸಾಗಣೆ ರೈಲನ್ನು ಓಡಿಸುವ ಮೂಲಕ ಭಾರತೀಯ ರೈಲ್ವೆ ಹೊಸ ಇತಿಹಾಸ ನಿರ್ಮಿಸಿದೆ. ಬಿಲಾಸ್ಪುರದಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಆಗ್ನೇಯ ಹಾಗೂ ಮಧ್ಯ ವಲಯ ರೈಲ್ವೆ ವಿಭಾಗ ಸೋಮವಾರ ಛತ್ತೀಸ್‌ಗಢದ ಭಿಲಾಯ್‌ನಿಂದ ಕೊರ್ಬಾ ರೈಲು ನಿಲ್ದಾಣದ ವರೆಗೆ 2 ಕಿ.ಮೀ. ಉದ್ದದ ಸರಕು ಸಾಗಣೆ ರೈಲನ್ನು ಯಶಸ್ವಿಯಾಗಿ ಓಡಿಸಿದೆ.
ಸಾಮಾನ್ಯವಾಗಿ ಸರಕು ಸಾಗಣೆ ರೈಲು 700 ಮೀಟರ್ ಉದ್ದವಿರುತ್ತದೆ. ಆದರೆ, ‘ಅನಕೊಂಡಾ’ ಎಂದೇ ಕರೆಸಿಕೊಂಡಿರುವ ಈ ರೈಲು ಮೂರು ಮೂರು ಗೂಡ್ಸ್ ರೈಲುಗಳನ್ನು ಜೋಡಿಸಿ ಸಿದ್ಧಪಡಿಸಲಾಗಿದೆ. ಈ ರೈಲು 147 ಬೋಗಿಗಳನ್ನು ಹೊಂದಿದೆ. ಡೀಸೆಲ್ ಎಂಜಿನ್, ಒಬ್ಬ ಲೋಕೋ ಪೈಲಟ್ (ರೈಲು ಚಾಲಕ) ಮತ್ತು ಸಹಾಯಕ ಲೋಕೋ ಪೈಲಟ್‌ನ ಸಹಾಯದಿಂದ ರೈಲನ್ನು ಯಶಸ್ವಿಯಾಗಿ ಓಡಿಸಲಾಗಿದೆ.
ಮೂರು ಗೂಡ್ಸ್ ರೈಲುಗಳನ್ನು ಒಂದಕ್ಕೊಂದು ಬೆಸೆಯುವ ತಂತ್ರಜ್ಞಾನವನ್ನು ಇಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಶಕ್ತಿ ನಿಯಂತ್ರಣಾ ವ್ಯವಸ್ಥೆಯ ಮೂಲಕ ಮುಂದಿನ ಎಂಜಿನ್ ಇಡೀ ರೈಲನ್ನು ಮುಂದಕ್ಕೆ ಎಳೆಯುತ್ತದೆ. ಈ ವಿಧಾನದಿಂದ ಡೀಸೆಲ್ ಹಾಗೂ ಸರಕು ಸಾಗಣೆ ವೆಚ್ಚವನ್ನು ಗಣನೀಯವಾಗಿ ತಗ್ಗಿಸಬಹುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.