Monday, June 8, 2026
Homeತಾಜಾ ಸುದ್ದಿಕುಟುಂಬದ ಕಲಹ ಇತ್ಯರ್ಥ ಮಾಡಲು ಬಂದ ಮಾವನಿಗೆ ಕೋರ್ಟ್ ಆವರಣದಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಅಳಿಯ

ಕುಟುಂಬದ ಕಲಹ ಇತ್ಯರ್ಥ ಮಾಡಲು ಬಂದ ಮಾವನಿಗೆ ಕೋರ್ಟ್ ಆವರಣದಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಅಳಿಯ

- Advertisement -
- Advertisement -

ರಾಯಚೂರು: ಕೌಟುಂಬಿಕ ಕಲಹ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿ ಮುಂದಿರುವ ಕೌಟುಂಬಿಕ ನ್ಯಾಯಾಲಯಕ್ಕೆ ಪಾನಮತ್ತನಾಗಿ ಬಂದಿದ್ದ ಅಳಿಯ ತನ್ನ ಹೆಂಡತಿ ಮತ್ತು ಮಾವನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ಈ ದಂಪತಿಗಳ ನಡುವೆ ಕೆಲದಿನಗಳಿಂದ ಜಗಳ ನಡೆಯುತ್ತಿದ್ದು, ದಿನಾಲೂ ಕುಡಿದು ಬಂದು ಹೆಂಡತಿಗೆ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ. ಇದರಿಂದ ರೋಸಿ ಹೋಗಿದ್ದ ಪತ್ನಿ ಗಂಡನ ಸಹವಾಸವೇ ಬೇಡವೆಂದು ತವರು ಮನೆ ಸೇರಿದ್ದರು.

ಈ ಕುರಿತು ಪೊಲೀಸ್ ಪ್ರಕರಣ ದಾಖಲಾಗಿದ್ದು, ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ದಂಪತಿಗಳು ನ್ಯಾಯಾಲಕ್ಕೆ ಬಂದಿದ್ದರು. ಈ ವೇಳೆ ಮದ್ಯ ಸೇವಿಸಿಕೊಂಡು ಬಂದಿದ್ದ ಪತಿ ಕೋರ್ಟ್ ಮುಂದೆಯೇ ಪತ್ನಿ ಜತೆ ಜಗಳ ಮಾಡುತ್ತ ಮನಸೋಇಚ್ಛೆ ಥಳಿಸಿದ್ದಾನೆ. ಪಕ್ಕದಲ್ಲೇ ಇದ್ದ ಮಾವನಿಗೂ ಹೊಡೆದಿದ್ದಾನೆ.

ಕೌಟುಂಬಿಕ ಕೋರ್ಟ್ ಕಲಾಪಕ್ಕೆ ‘ಎಣ್ಣೆ’ ಕುಡಿದುಕೊಂಡು ಬಂದದ್ದೇ ತಪ್ಪು. ಅಂತಹದ್ದರಲ್ಲಿ ಪತ್ನಿ ಹಾಗೂ ಮಾನವನಿಗೂ ಥಳಿಸಿದ್ದಾನೆ. ಗಲಾಟೆ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಪೊಲೀಸರು ಹಲ್ಲೆ ಮಾಡಿದ ವ್ಯಕ್ತಿಯನ್ನ ಕೋರ್ಟ್ ಒಳಗೆ ಕರೆದೊಯ್ದರು.

- Advertisement -

Latest News

error: Content is protected !!