Friday, June 5, 2026
Homeತಾಜಾ ಸುದ್ದಿಹೈಕೋರ್ಟ್ ಮೆಟ್ಟಿಲೇರಿದ ರಾಗಿಣಿ ದ್ವಿವೇದಿ- ಸಿಗಲಿದೆಯೇ ಜಾಮೀನು?…

ಹೈಕೋರ್ಟ್ ಮೆಟ್ಟಿಲೇರಿದ ರಾಗಿಣಿ ದ್ವಿವೇದಿ- ಸಿಗಲಿದೆಯೇ ಜಾಮೀನು?…

- Advertisement -
- Advertisement -

ಬೆಂಗಳೂರು: ರಾಗಿಣಿ ದ್ವಿವೇದಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾದ ನಂತರ ದಿನಕ್ಕೊಂದು ಹೊಸ ಕಥೆ ನಡೆಯುತ್ತಲೇ ಇದೆ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟಿ ಜಾಮೀನು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.

ಡ್ರಗ್ಸ್ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ನಾನು ಡ್ರಗ್ಸ್ ಸೇವನೆ ಮಾಡಿಲ್ಲ. ಪೂರೈಕೆ ಅಥವಾ ಮಾರಾಟವನ್ನು ಮಾಡಿಲ್ಲ. ಪೊಲೀಸರು ಮಾಡಿರುವ ಆರೋಪಗಳಿಗೆ ದಾಖಲೆ ಇಲ್ಲ ಎಂದು ರಾಗಿಣಿ ಮನವಿ ಮಾಡಿದ್ದರು,ರಾಗಿಣಿಗೆ ಈ ಹಿಂದೆಯೇ ಎನ್ ಡಿಪಿಎಸ್ ವಿಶೇಷ ಕೋರ್ಟ್ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ತಪಾಸಣೆ ವೇಳೆ ಮಾದಕ ಪದಾರ್ಥಗಳು ನನ್ನ ಮನೆಯಲ್ಲಿ ದೊರೆತಿಲ್ಲ. ಹೀಗಿದ್ದರೂ ಪೊಲೀಸರು ಬಂಧಿಸಿರುವುದು ಕಾನೂನುಬಾಹಿರವಾಗಿದೆ ಎಂದು ರಾಗಿಣಿ ದೂರಿದ್ದು ಜಾಮೀನು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆನ್ನಲಾಗಿದೆ.

- Advertisement -

Latest News

error: Content is protected !!