- Advertisement -
![]()
- Advertisement -
ಹೈದರಾಬಾದ್: ಇಲ್ಲಿನ ಸಂಗಾರೆಡ್ಡಿ ಜಿಲ್ಲೆಯ ಅನಂತಸಾಗರ ಎಂಬ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ತಲೆ ಕಡಿದು, ಆ ತಲೆಯನ್ನು ಟೂ ವೀಲ್ಹರ್ ಮೇಲೆ ಇಟ್ಟುಸರಿಸುಮಾರು 5 ಕಿ.ಮೀ. ಪ್ರಯಾಣ ಮಾಡಿದ್ದಾನೆ.
ಬುಧವಾರ ರಾತ್ರಿ ಘಟನೆ ನಡೆದಿತ್ತು. ಆರೋಪಿಯನ್ನು ಜುರ್ರು ಸಾಯಿಲು ಎಂದು ಗುರುತಿಸಲಾಗಿದೆ. ಆರೋಪಿಯ ಪತ್ನಿ ಅಂಶಮ್ಮಾ (35) ಮೃತ ಮಹಿಳೆ. ಜುರ್ರು ತನ್ನ ಪತ್ನಿಯ ಶೀಲವನ್ನು ಶಂಕಿಸಿ, ಅನೈತಿಕ ಸಂಬಂಧದ ವಿಚಾರವಾಗಿ ಕ್ರುದ್ಧನಾಗಿದ್ದ. ಈ ವಿಚಾರವಾಗಿ ನಡೆದ ಜಗಳದಲ್ಲಿ ಪತ್ನಿಯ ತಲೆ ಕಡಿದು, ಉಳಿದ ಶರೀರವನ್ನು ಮನೆಯ ಸಮೀಪವೇ ಇದ್ದ ಪೊದೆಗೆ ಎಸೆದಿದ್ದ.
ಬಳಿಕ ತಲೆಯನ್ನು ಟೂ ವೀಲ್ಹರ್ ಮೇಲೆ ಇಟ್ಟುಕೊಂಡು ಗ್ರಾಮದಿಂದ 5 ಕಿ.ಮೀ. ದೂರದ ನಾರಾಯಣಖೇಡ್ಗೆ ಕೊಂಡೊಯ್ದ. ಅಲ್ಲಿ ತಾನು ಶಂಕಿಸಿದ್ದ ಪತ್ನಿಯ ಪ್ರೇಮಿ ಎನ್ನಲಾದವನ ಮನೆಯ ಬಾಗಿಲಿನಲ್ಲಿ ಇಟ್ಟಿದ್ದಾನೆ ಬಳಿಕ ನಾರಾಯಣಖೇಡ್ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.
- Advertisement -


