Friday, May 17, 2024
Homeಕರಾವಳಿಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ರಾಘವ ಎಚ್  ಆಯ್ಕೆ

ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ರಾಘವ ಎಚ್  ಆಯ್ಕೆ

spot_img
- Advertisement -
- Advertisement -

ಬೆಳ್ತಂಗಡಿ; ರಾಜ್ಯ ಸರ್ಕಾರ ಇಂದು ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ಆಯ್ಕೆ ಮಾಡಿ ಆದೇಶ ಹೊರಜಿಸಿದೆ. ಅದರಂತೆ  ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕಕೇತ್ರದಲ್ಲಿ ಗುರುತಿಸಿಕೊಂಡಿರುವ ಕಳಿಯ ಗ್ರಾಮದ ಹೊಸಮರಡ್ಡ ನಿವಾಸಿ , ಪ್ರಸ್ತುತ ನಾಳ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಇದರ ಪ್ರಬಂಧಕರಾದ ರಾಘವ ಎಚ್ ಅವರು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಆಯ್ಕೆ ಆಗಿದ್ದಾರೆ.

ಅವರು ಕೊರಂಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಗೇರುಕಟ್ಟೆ ಪ್ರೌಢ ಶಾಲೆಯಲ್ಲಿ ಪ್ರೌಢ ಶಿಕ್ಷಣ ಹಾಗೂ ಉಜಿರೆ ಎಸ್ ಡಿ ಎಂ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದಿದ್ದಾರೆ.ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಭಿವೃದ್ಧಿ ಸಮಿತಿಯಲ್ಲಿ, ಗೇರುಕಟ್ಟೆ ಬದಿನಡೆ ಮಂಜಲಡ್ಕ ಪರಿವಾರ ದೈವಗಳ ಸಾನಿಧ್ಯ ಸಮಿತಿ ಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು. ಗೇರುಕಟ್ಟೆ ಮಾರಿ ಪೂಜೆ ಸಮಿತಿ ಕಾರ್ಯದರ್ಶಿಯಾಗಿ, ಪುಣಿಕಲ್ಲುಕುಕ್ಕು  ಶನಿ ಪೂಜೆ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕೆಲ ವರ್ಷಗಳ ಕಾಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಮೇಲ್ವಿಚಾರಕರಾಗಿ ದುಡಿದ ಅನುಭವ ಇದೆ. ನಾಟಕ, ಯಕ್ಷಗಾನ ಕಲಾವಿದರಾಗಿದ್ದ ರಾಘವ ಅವರು ಉತ್ತಮ‌ ಸಂಘಟಕರಾಗಿದ್ದಾರೆ. ಹಲವಾರು ಯಕ್ಷಗಾನ, ತಾಳಮದ್ದಲೆಗಳನ್ನು ಸಂಯೋಜಿಸಿದ ಅನುಭವ ಹೊಂದಿದ್ದಾರೆ.ಸುಂಕದಕಟ್ಟೆ ಮೇಳ, ಕೊಲ್ಲಂಗಾನ ಮೇಳ, ಬಪ್ಪನಾಡು ಮೇಳ, ತಳಕಲ ಮೇಳ, ಬಾಚಕೆರೆ ಮೇಳ, ದೇಂತಡ್ಕ ಮೇಳ, ಬೆಂಕಿನಾಥೇಶ್ವರ ಮೇಳದಲ್ಲಿ ತಿರುಗಾಟದ ಅನುಭವ

- Advertisement -
spot_img

Latest News

error: Content is protected !!