Wednesday, June 3, 2026
Homeಕರಾವಳಿಬೆಳ್ತಂಗಡಿ: ಸವಣಾಲು ಶ್ರೀ ಕೊಡಮಣಿತ್ತಾಯ ನೇಮೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವ

ಬೆಳ್ತಂಗಡಿ: ಸವಣಾಲು ಶ್ರೀ ಕೊಡಮಣಿತ್ತಾಯ ನೇಮೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವ

- Advertisement -
- Advertisement -

ಬೆಳ್ತಂಗಡಿ: ಸವಣಾಲು ಗ್ರಾಮದ ಗಡು ಹಾಕಿದ ಸ್ಥಳ ಮಂಜದಬೆಟ್ಟುವಿನಲ್ಲಿ ಪ್ರತೀ ವರ್ಷದಂತೆ ಮಾರ್ಚ್ 23 ಮತ್ತು ಮಾ. 24 ರಂದು ಇತಿಹಾಸ ಪ್ರಸಿದ್ಧ ಶ್ರೀ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ನೇಮೋತ್ಸವ ಹಾಗೂ ಅಮ್ಮನವರ ಜಾತ್ರೋತ್ಸವ ಈ ವರ್ಷವೂ ಪೂರ್ವ ಸಂಪ್ರದಾಯದಂತೆ ನಡೆಯಲಿದೆ .

ಆ ಪ್ರಯುಕ್ತ ಪಿಲಿಚಾಂಮುಂಡಿ ದೈವದ ಪರ್ವ ಸೇವೆ ,ಗೊನೆ ಮುಹೂರ್ತ, ಚಪ್ಪರ ಮುಹೂರ್ತ, ಕೋಳಿ ಗೂಟ ಮತ್ತು ಚೆಂಡು ಹಾಕುವ ಕಾರ್ಯಕ್ರಮ 21 ಮಾರ್ಚ್ ಗುರುವಾರ ಮಂಜದಬೆಟ್ಟುವಿನಲ್ಲಿ ನಡೆಯಲಿದೆ .ಮಾರ್ಚ್ 23 ರಂದು ರಾತ್ರಿ ಕೊಡಮಣಿತ್ತಾಯ ಹಾಗೂ ಪಿಲಿ ಚಾಮುಂಡಿ, ಕಲ್ಕುಡ, ಕಲ್ಲುರ್ಟಿ, ಸೂಕತ್ತರಿ ನೇಮೋತ್ಸವ ನಡೆಯಲಿದೆ. ಮಾರ್ಚ್ 24 ರಂದು ರಾತ್ರಿ ಅಕ್ಕೆ ಕಾಳಾಮ್ಮ ನೇಮೋತ್ಸವ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮದಲ್ಲಿ ಊರ ಹಾಗೂ ಪರವೂರ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ .

- Advertisement -

Latest News

error: Content is protected !!