Friday, June 5, 2026
HomeUncategorizedಮಂಗಳೂರು: “ಕೋಡಿಕಲ್ ನಾಗಬನ ದ್ವಂಸ ಪ್ರಕರಣ; ಆರೋಪಿಗಳ ಬಂಧನಕ್ಕೆ ಆಗ್ರಹ"

ಮಂಗಳೂರು: “ಕೋಡಿಕಲ್ ನಾಗಬನ ದ್ವಂಸ ಪ್ರಕರಣ; ಆರೋಪಿಗಳ ಬಂಧನಕ್ಕೆ ಆಗ್ರಹ”

- Advertisement -
- Advertisement -

ಮಂಗಳೂರು: ಕೋಡಿಕಲ್ 9ನೇ ಕ್ರಾಸ್ ನಲ್ಲಿ ನಾಗನ ಕ್ಷೇತ್ರವನ್ನು ಅಪವಿತ್ರಗೊಳಿಸಿ, ನಾಗನ ಪ್ರತಿಮೆಯನ್ನು ಎಸೆದು ಹಿಂದೂಗಳ ಭಾವನೆಗೆ ದಕ್ಕೆ ಉಂಟುಮಾಡಿದ ದುಷ್ಕರ್ಮಿಗಳ ಕೃತ್ಯವನ್ನು ರಾಮ್ ಸೇನಾ ತೀವ್ರವಾಗಿ ಕಂಡಿಸಿದೆ.


ಸ್ಥಳಕ್ಕೆ ರಾಮ್ ಸೇನಾ ದಕ್ಷಿಣ.ಕನ್ನಡ ಜಿಲ್ಲಾ ಅಧ್ಯಕ್ಷರಾದ ಕಿರಣ್ ಅಮೀನ್ ಉರ್ವಸ್ಟೋರ್ ಹಾಗೂ ಜಿಲ್ಲಾ ಪ್ರಮುಖರು ಹಾಗೂ ಕಾರ್ಯಕರ್ತರು ಬೇಟಿನೀಡಿದ್ದು, ಕೋಡಿಕಲ್ ಅಲ್ಲಿಯ ಕಾರ್ಪೊರೇಟರ್ ಕಿರಣ್ ಕುಮಾರ್ ಹಾಗೂ ಅಲ್ಲಿಯ ಪೋಲಿಸ್ ಅಧಿಕಾರಿಗಳೊಡನೆ ವಿಷಯದ ಕುರಿತಾಗಿ ಚರ್ಚಿಸಿ, ಆರೋಪಿಗಳನ್ನು ಆದಷ್ಟು ಬೇಗನೆ ಬಂಧಿಸುವ ಕುರಿತಾಗಿ ಆಗ್ರಹಿಸಿದರು.


ಆರೋಪಿಗಳ ಬಂಧನವಾಗದಿದ್ದಲ್ಲಿ ದಿನಾಂಕ ನವೆಂಬರ್ 15 ರಂದು ನಡೆಯುವ ಕೋಡಿಕಲ್ ಬಂದ್ ಗೆ ರಾಮ್ ಸೇನಾ ದ.ಕನ್ನಡ ಜಿಲ್ಲೆ, ಇದರ ಸಂಪೂರ್ಣ ಬೆಂಬಲವಿರುತ್ತದೆ.


ಇತ್ತೀಚೆಗೆ ದ.ಕ ಜಿಲ್ಲೆಯಲ್ಲಿ ಇಂತಹ ಕೃತ್ಯಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಪೊಲೀಸ್ ಇಲಾಖೆ ಸ್ಪಂದಿಸುತ್ತಿಲ್ಲ, ಇನ್ನು ಮುಂದಕ್ಕೆ ಜಿಲ್ಲೆಯಲ್ಲಿ ಇಂತಹ ನೀಚ ಕೃತ್ಯ ಕಂಡುಬಂದಲ್ಲಿ, ರಾಮ್ ಸೇನಾ ಇದರ ಕುರಿತು ಉಗ್ರ ಹೋರಾಟಕ್ಕೆ ಚಾಲನೆ ನೀಡುತ್ತದೆ.ಇದಕ್ಕೆ ಪೊಲೀಸ್ ಇಲಾಖೆಯೇ ಕಾರಣವಾಗುತ್ತದೆ.

- Advertisement -

Latest News

error: Content is protected !!