Friday, May 3, 2024
Homeಕರಾವಳಿಪಣೆಕ್ಕರದಲ್ಲಿ ಭಾರಿ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಸ್ಥಳೀಯರು

ಪಣೆಕ್ಕರದಲ್ಲಿ ಭಾರಿ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಸ್ಥಳೀಯರು

spot_img
- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಕಣಿಯೂರು ಗ್ರಾಮದ ಪಣೆಕ್ಕರದಲ್ಲಿ ಬಾರಿ ಗಾತ್ರದ ಹೆಬ್ಬಾವೊಂದು ಪ್ರತ್ಯಕ್ಷ ಆಗಿದೆ. ಇದು ಕೆಲ ಹೊತ್ತು ಸುತ್ತಲಿನ ಜನರಲ್ಲಿ ಆತಂಕ ಮೂಡುವಂತೆ ಮಾಡಿತ್ತು. ಈ ಹೆಬ್ಬಾವು ಪಣೆಕ್ಕರ ಪರಿಸರದಲ್ಲಿ ಅನೇಕ ಮನೆಯ ಕೋಳಿಗಳನ್ನು ಹಿಡಿದು ತಿಂದಿತ್ತು.

ಈ ಹಾವನ್ನು ಮೊದಲು ಕಂಡ ಪಣೆಕ್ಕರ ನಿವಾಸಿ ಹರ್ಷ, ಕೊಡಲೇ ಸ್ಥಳೀಯ ಉರಗ ಪ್ರೇಮಿ ನೆಕ್ಕಿಲು ಶಾಂತಪ್ಪ ಪೂಜಾರಿ ಎಂಬವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಶಾಂತಪ್ಪ ಪೂಜಾರಿ, ಲಕ್ಷ್ಮಿಶ ಎಂಬವರ ಸಹಾಯದಿಂದ ಹೆಬ್ಬಾವನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.

‘ಹಾವನ್ನು ಕಂಡ ಕೂಡಲೇ ಕೊಲ್ಲುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಪಣೆಕ್ಕರ ನಿವಾಸಿಗಳು ಮೊಬೈಲ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮಾಹಿತಿ ನೀಡಿದ್ದರಿಂದಾಗಿ ಹಾವು ರಕ್ಷಣೆ ಸಾಧ್ಯವಾಯಿತು. ರಕ್ಷಣೆಗೆ ನೆರವಾದ ಪಣೆಕ್ಕರ ಪರಿಸರಾದ ಜನತೆ ಅಭಿನಂದನೆಗೆ ಅರ್ಹರು ಎಂದು ಶಾಂತಪ್ಪ ಪೂಜಾರಿ ಹೇಳಿದರು.

- Advertisement -
spot_img

Latest News

error: Content is protected !!