Saturday, June 6, 2026
Homeಚಿಕ್ಕಮಗಳೂರುಚಾರ್ಮಾಡಿ ಘಾಟ್ ಗೆ ಪಿಡಬ್ಲ್ಯೂಡಿ ರಾಜ್ಯ ಕಾರ್ಯದರ್ಶಿ ಶ್ರೀ ಕೃಷ್ಣ ರೆಡ್ಡಿ  ಹಾಗೂ ರಾಷ್ಟ್ರೀಯ ಹೆದ್ದಾರಿ...

ಚಾರ್ಮಾಡಿ ಘಾಟ್ ಗೆ ಪಿಡಬ್ಲ್ಯೂಡಿ ರಾಜ್ಯ ಕಾರ್ಯದರ್ಶಿ ಶ್ರೀ ಕೃಷ್ಣ ರೆಡ್ಡಿ  ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭೇಟಿ

- Advertisement -
- Advertisement -

ಚಾರ್ಮಾಡಿ: ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ ಗೆ ಲೋಕೋಪಯೋಗಿ ಇಲಾಖೆ ರಾಜ್ಯ ಕಾರ್ಯದರ್ಶಿ ಶ್ರೀ ಕೃಷ್ಣ ರೆಡ್ಡಿ  ಹಾಗೂ  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಭೇಟಿ ನೀಡಿತು. ಚಾರ್ಮಾಡಿ ಘಾಟ್ ನಲ್ಲಿ ಎರಡು ವರ್ಷಗಳ ಹಿಂದೆ ಭೂಕುಸಿತ, ಕಣಿವೆ ಭಾಗದಲ್ಲಿ ಕುಸಿತ, ಹಾಗೂ ಮಳೆ ಗಾಳಿಗೆ ರಸ್ತೆ ಹಾಗೂ ತಡೆಗೋಡೆಗಳು ಸಂಪೂರ್ಣ ಹಾನಿಯಾಗಿದ್ದವು.

ಈಗಾಗಲೇ ರಸ್ತೆ ಕೆಲಸ ತಾತ್ಕಾಲಿಕ ಮುಗಿದಿದ್ದು, ರಸ್ತೆ ಎರಡು ಬದಿ ಕೆಲವು ಕಡೆ ತಡೆ ಗೋಡೆ ಕಾಮಗಾರಿ ನಡೆಯುತ್ತಿದ್ದು,  ಆದಷ್ಟು ಬೇಗ ಕಾಮಗಾರಿ ಮುಗಿಸುವಂತೆ ಹಾಗೂ ಮಳೆಗಾಲದಲ್ಲಿ ಯಾವುದೇ ತೊಂದರೆಯಾಗದಂತೆ ಚಾರ್ಮಾಡಿ ಘಾಟ್ ನಲ್ಲಿ , ಸರಿಯಾಗಿ ನಿರ್ವಹಣೆ ಮಾಡುವಂತೆ  ಸಂಬಂಧಪಟ್ಟ ಅಧಿಕಾರಿಗಳಿಗೆ ಇದೇ ವೇಳೆ ಸೂಚಿಸಿದರು.

ಹಾಸನ ವಿಭಾಗ ಕಾರ್ಯ ನಿರ್ವಾಹಕ ಇಂಜಿನಿಯರ್ ಶ್ರೀಮತಿ ಅರ್ಚನಾ, ಬೇಲೂರು NHAEE ಇಂಜಿನಿಯರ್ ಮುನಿರಾಜ್, ಹಾಗೂ ಸಹಾಯಕ ಇಂಜಿನಿಯರ್ ಸಂತೋಷ್ ಮುಂತಾದವರು ಇದ್ದರು.

- Advertisement -

Latest News

error: Content is protected !!