Wednesday, June 3, 2026
Homeತಾಜಾ ಸುದ್ದಿಮಳೆ ಹಾನಿ ವೀಕ್ಷಿಸಲು ಹೋಗಿ ಹೊಳೆಯಲ್ಲಿ ಬಾಕಿಯಾದ ಅಧಿಕಾರಿಗಳು: ಕಾರಿನ ಮೇಲೆ ಹತ್ತಿ ಅಪಾಯದಿಂದ ಬಚಾವ್

ಮಳೆ ಹಾನಿ ವೀಕ್ಷಿಸಲು ಹೋಗಿ ಹೊಳೆಯಲ್ಲಿ ಬಾಕಿಯಾದ ಅಧಿಕಾರಿಗಳು: ಕಾರಿನ ಮೇಲೆ ಹತ್ತಿ ಅಪಾಯದಿಂದ ಬಚಾವ್

- Advertisement -
- Advertisement -

ಚಾಮರಾಜನಗರ: ಮಳೆ ಹಾನಿ ಪರಿಶೀಲನೆಗೆ ಹೋಗಿ ಅಧಿಕಾರಿಗಳು ನೀರಿನಲ್ಲಿ‌ ಸಿಲುಕಿಕೊಂಡ‌ ಘಟನೆ‌ ಚಾಮರಾಜನಗರ ‌ಜಿಲ್ಲೆಯಲ್ಲಿ ನಡೆದಿದೆ.

ರಭಸವಾಗಿ ಹರಿಯುತ್ತಿದ್ದ ನೀರಿನ ನಡುವೆ ಸಿಲುಕಿದ ಅಧಿಕಾರಿಗಳ ಕಾರು ಬಾಕಿಯಾಗಿದ್ದು,‌ ಚಾಮರಾಜನಗರ ತಾಲೂಕಿನ ಕಣ್ಣೇಗಾಲ-ಆಲೂರು ನಡುವೆ ಈ ಘಟನೆ ಸಂಭವಿಸಿದೆ.

ಲೋಕೋಪಯೋಗಿ ಇಲಾಖೆ ಎಇಇ ಕಾಂತರಾಜು, ಎಇ ರಾಜು ಮತ್ತು ಚಾಲಕ ಮುರುಗೇಶ್ ಕಾರಿನಲ್ಲಿ ಹೊಳೆ ದಾಟುತ್ತಿದ್ದಾಗ ಇದ್ದಕ್ಕಿದ್ದಂತೆ ನೀರಿನ ಮಟ್ಟ ಹೆಚ್ಚಳವಾಗಿದೆ.ಕೂಡಲೇ ಕಾರಿನ ಮೇಲೆ ಹತ್ತಿ ಕುಳಿತ ಅಧಿಕಾರಿಗಳು ಬಚಾವಾಗಿದ್ದಾರೆ.

ಕೊನೆಗೆ ನೀರಿನಲ್ಲಿ ಮುಳುಗಿದ ಕಾರನ್ನು ಹಗ್ಗ ಕಟ್ಟಿ ಎಳೆದು ಅಧಿಕಾರಿಗಳನ್ನು ಸ್ಥಳೀಯರು ರಕ್ಷಿಸಿದ್ದಾರೆ.

- Advertisement -

Latest News

error: Content is protected !!