Tuesday, May 7, 2024
Homeಕ್ರೀಡೆಟೋಕಿಯೋ ಒಲಿಂಪಿಕ್ಸ್ ; ಪಿ ವಿ ಸಿಂಧು ಚಿನ್ನದ ಕನಸು ಭಗ್ನ!!

ಟೋಕಿಯೋ ಒಲಿಂಪಿಕ್ಸ್ ; ಪಿ ವಿ ಸಿಂಧು ಚಿನ್ನದ ಕನಸು ಭಗ್ನ!!

spot_img
- Advertisement -
- Advertisement -

ಟೋಕಿಯೊ: ಬಂಗಾರದ ಪದಕದ ನಿರೀಕ್ಷೆ ಮೂಡಿಸಿದ್ದ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಸೆಮಿ ಫೈನಲ್ ನಲ್ಲಿ ಚೈನೀಸ್ ತೈಪೆಯ ತೈ ಜು ಯಿಂಗ್ ವಿರುದ್ಧ 21-18, 21-12 ನೇರ ಸೆಟ್ ಗಳಲ್ಲಿ ಸೋಲನುಭವಿಸಿದರು.

ಶನಿವಾರ ನಡೆದ ವನಿತೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ನಲ್ಲಿ ಪಿವಿ ಸಿಂಧು 18-21, 12-21 ನೇರ ಸೆಟ್ ಗಳಿಂದ ವಿಶ್ವದ ಅಗ್ರಮಾನ್ಯ ಆಟಗಾರ್ತಿ ತೈಪೆಯ ತೈ ಜು ಯಿಂಗ್ ವಿರುದ್ಧ ಸೋಲುಂಡರು. ಈ ಮೂಲಕ ಫೈನಲ್ ಪ್ರವೇಶಿಸುವ ಕನಸು ಭಗ್ನಗೊಂಡರೂ, ಕಂಚಿನ ಪದಕ ಗಳಿಸುವ ಅವಕಾಶ ಹೊಂದಿದ್ದಾರೆ.

ಸಿಂಧು ಕಂಚಿನ ಪದಕಕ್ಕಾಗಿ ನಡೆಯುವ ಪಂದ್ಯದಲ್ಲಿ ಚೀನಾದ ಹಿ ಬಿಂಗಿಜಿಯೊ ಅವರನ್ನು ಸಿಂಧು ಎದುರಿಸಲಿದ್ದಾರೆ. ಒಂದು ವೇಳೆ ಸಿಂಧು ಕಂಚು ಪದಕ ಗೆದ್ದರೆ ಭಾರತದ ಪರ ಅತೀ ಹೆಚ್ಚು (2) ಪದಕ ಗೆದ್ದ ಕುಸ್ತಿಪಟು ಸುಶೀಲ್ ಕುಮಾರ್ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಸುಶೀಲ್ ಕುಮಾರ್ 2008ರಲ್ಲಿ ಕಂಚು ಹಾಗೂ 2012ರಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದರು.

- Advertisement -
spot_img

Latest News

error: Content is protected !!