Thursday, June 4, 2026
Homeಕರಾವಳಿಪುತ್ತೂರು:ಕಾರಿನ ಬೋನೆಟ್ ಸೇರಿದ್ದ 8 ಅಡಿ ಗಾತ್ರದ ಹೆಬ್ಬಾವಿನ ರಕ್ಷಣೆ

ಪುತ್ತೂರು:ಕಾರಿನ ಬೋನೆಟ್ ಸೇರಿದ್ದ 8 ಅಡಿ ಗಾತ್ರದ ಹೆಬ್ಬಾವಿನ ರಕ್ಷಣೆ

- Advertisement -
- Advertisement -

ಪುತ್ತೂರು: ಕಾರಿನ ಬೋನೆಟ್ ಸೇರಿದ್ದ ಭಾರಿ ಗಾತ್ರದ ಹೆಬ್ಬಾವನ್ನು ರಕ್ಷಣೆ ಮಾಡಿದ ಘಟನೆ  ಪುತ್ತೂರು ತಾಲೂಕಿನ ಶೇಡಿಯಾಪು ಎಂಬಲ್ಲಿ ನಡೆದಿದೆ.

ಶೇಡಿಯಾಪು ನಿವಾಸಿ ತೇಜಸ್ ಗೌಡ ಎಂಬವರ ಮನೆಯ ಕೋಳಿ ಗೂಡಿನ ಬಳಿ ಮುಂಜಾನೆ ಪತ್ತೆಯಾಗಿದ್ದ ಹೆಬ್ಬಾವನ್ನು ನೋಡಿದ ಮನೆ ಕೆಲಸಗಾರರು ಹೆಬ್ಬಾವನ್ನು ಹಿಡಿಯಲು ಪ್ರಯತ್ನಿಸಿದ್ದರು. ಆದರೆ ಕೆಲಸಗಾರರ ಕೈಯಿಂದ ತಪ್ಪಿಸಿದ ಹೆಬ್ಬಾವು ಮನೆಯ ಶೆಡ್ ನಲ್ಲಿ ನಿಲ್ಲಿಸಿದ್ದ ಕಾರಿನ ಅಡಿಗೆ ನುಗ್ಗಿ, ಅಲ್ಲಿಂದ ನೇರವಾಗಿ ಕಾರಿನ ಬೋನೆಟ್ ಒಳಗೆ ಸೇರಿಕೊಂಡಿದೆ.

ಮನೆ ಮಂದಿ ಎಷ್ಟು ಪ್ರಯತ್ನಿಸಿದರೂ, ಹಾವನ್ನು ಹೊರ ತೆಗೆಯಲಾಗದ ಹಿನ್ನಲೆಯಲ್ಲಿ ಪುತ್ತೂರಿನ ಉರಗಪ್ರೇಮಿ ತೇಜಸ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕಾರಿನ ಬೋನೆಟ್ ಒಳಗೆ ಭದ್ರವಾಗಿ ಕುಳಿತಿದ್ದ ಹಾವನ್ನು ಹರಸಾಹಸ ಪಟ್ಟು ಹೊರತೆಗೆಯಲಾಗಿದ್ದು, ಸುಮಾರು 8 ಅಡಿ ಉದ್ದದ ಈ ಹಾವನ್ನು ಬಳಿಕ ಕಾಡಿಗೆ ಬಿಡಲಾಗಿದೆ.

- Advertisement -

Latest News

error: Content is protected !!