- Advertisement -
- Advertisement -
ಪುತ್ತೂರು:ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಲೈನ್‌ಮ್ಯಾನ್‌ವೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಶನಿವಾರ ಕೆದಿಲದಲ್ಲಿ ನಡೆದಿದೆ.
ಕೆದಿಲ ಪಾಟ್ರಕೋಡಿ ಹಾಗೂ ಮಿತ್ತೂರು ಗಡಿಯಾರ ನಿವಾಸಿಯಾಗಿರುವ ರವಿ ಮೃತಪಟ್ಟ ಲೈನ್‌ಮ್ಯಾನ್. ಅವರು ಕೆದಿಲ ಪ್ರದೇಶದಲ್ಲಿ ಲೈನ್‌ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಶನಿವಾರ ಮಾರ್ಗ ದುರಸ್ತಿ ಕರ್ತವ್ಯದಲ್ಲಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಹರಿದು ರವಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಸದಾ ಜನಪರವಾಗಿ ಗುರುತಿಸಿಕೊಂಡಿದ್ದ ರವಿ, ಗ್ರಾಮಸ್ಥರಿಂದ ವಿದ್ಯುತ್ ಸಮಸ್ಯೆ ಕುರಿತು ಕರೆ ಬಂದ ತಕ್ಷಣ ಸ್ಥಳಕ್ಕೆ ಧಾವಿಸಿ ಸಮಸ್ಯೆ ಪರಿಹರಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು.
- Advertisement -


