Wednesday, June 24, 2026
Homeಅಪರಾಧಪುತ್ತೂರು ಶಾಸಕ ಅಶೋಕ್ ರೈ ಬ್ಯಾನರ್ ಗೆ ಹಾನಿ: ಕಿಡಿಗೇಡಿಗಳ ವಿರುದ್ಧ ದೂರು ದಾಖಲು

ಪುತ್ತೂರು ಶಾಸಕ ಅಶೋಕ್ ರೈ ಬ್ಯಾನರ್ ಗೆ ಹಾನಿ: ಕಿಡಿಗೇಡಿಗಳ ವಿರುದ್ಧ ದೂರು ದಾಖಲು

- Advertisement -
- Advertisement -

ಪುತ್ತೂರು: ರಸ್ತೆ ನಿರ್ಮಾಣಕ್ಕೆ ಅನುದಾನ ಒದಗಿಸಿಕೊಟ್ಟ ಶಾಸಕರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ ಬ್ಯಾನರನ್ನು ಹರಿದು ಹಾಕಿದ ಘಟನೆ ನಡೆದಿದೆ.

ಪುರುಷರಕಟ್ಟೆ-ಶಿಬರ – ನಡುವಾಲ್ ರಸ್ತೆ ಅಭಿವೃದ್ಧಿಯ ಮತ್ತು ಶಾಶ್ವತ ರಸ್ತೆ ನಿರ್ಮಾಣಕ್ಕೆ ಅನುದಾನ ಒದಗಿಸಿಕೊಟ್ಟ ಶಾಸಕರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ ಬ್ಯಾನರನ್ನು ಹರಿದು ಹಾಕಿದ್ದು, ಈ ಘಟನೆಯ ಬಗ್ಗೆ ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ಕೈಂದಾಡಿಯವರು ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅಶೋಕ್ ರೈ ಅವರು ರಸ್ತೆ ಕಾಮಗಾರಿಗೆ 5 ಲಕ್ಷ ಅನುದಾನವನ್ನೂ ಒದಗಿಸಿದ್ದರು. ಈ ಸಂಬಂಧ ಸ್ಥಳೀಯರು ಶಾಸಕರಿಗೆ ಅಭಿನಂದನೆ ಸಲ್ಲಿಸಿ ಬ್ಯಾನ‌ರ್ ಅಳವಡಿಸಿದ್ದರು. ಈ ಬ್ಯಾನರನ್ನು ಕಿಡಿಗೇಡಿಗಳು ಹರಿದು ಹಾಕಿದ್ದು ಆರೋಪಿಗಳನ್ನು ಬಂಧಿಸುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.

- Advertisement -

Latest News

error: Content is protected !!