Tuesday, May 7, 2024
Homeಕರಾವಳಿಪುತ್ತೂರು: ಮೆಸ್ಕಾಂ ಎಇಇ ಬೆದರಿಕೆ ಒಡ್ಡಿದ ಪ್ರಕರಣ; ದೂರು ದಾಖಲು

ಪುತ್ತೂರು: ಮೆಸ್ಕಾಂ ಎಇಇ ಬೆದರಿಕೆ ಒಡ್ಡಿದ ಪ್ರಕರಣ; ದೂರು ದಾಖಲು

spot_img
- Advertisement -
- Advertisement -

ಪುತ್ತೂರು: ಮೆಸ್ಕಾಂ ಎಇಇ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ.  ಕೃಷಿ ನೀರಾವರಿ ಪಂಪ್ ಸೆಟ್ ಗೆ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದಕ್ಕೆ ವಿದ್ಯುತ್ ಗುತ್ತಿಗೆದಾರನೊಬ್ಬ ಬನ್ನೂರು ಮೆಸ್ಕಾಂ ಉಪವಿಭಾಗ ಕಚೇರಿಗೆ ತೆರಳಿ ಮೆಸ್ಕಾಂ ಎಇಇ ಅವರಿಗೆ ಬೆದರಿಕೆ ಒಡ್ಡಿದ್ದ. ಈ ಹಿನ್ನೆಲೆ ರಿ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿರುವ ಆರೋಪದಡಿ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು ಸನಾ ಇಲೆಕ್ಟ್ರಿಕಲ್ಸ್ ಮಾಲಕ ಮಹಮ್ಮದ್ ನಿಸಾರ್ ಬೆದರಿಕೆ ಒಡ್ಡಿದ ಆರೋಪಿ. ಈತನ ವಿರುದ್ಧ ಮೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ (ಎಇಇ) ರಾಮಚಂದ್ರ ದೂರು ನೀಡಿದ್ದಾರೆ.

ಜೂ.14ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಹಮ್ಮದ್ ನಿಸಾರ್ ಕಚೇರಿಗೆ ಆಗಮಿಸಿ ಮುಂಡೂರು ಗ್ರಾಮದ ರಮೇಶ್ ಅವರ ಕೃಷಿ ನೀರಾವರಿ ಪಂಪ್ ಸೆಟ್ ಗೆ ನೀಡಿದ ಅರ್ಜಿಯನ್ನು ತಿರಸ್ಕಾರ ಮಾಡಿದ್ದೇಕೆ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾನೆ. ಇಲಾಖೆಯ ನಿಯಮದ ಅನುಸಾರ ಅರ್ಜಿಯನ್ನು ತಿರಸ್ಕಾರ ಮಾಡಲಾಗಿದ್ದರೂ ಬೆದರಿಕೆ ಒಡ್ಡಿದ್ದಾನೆ ಎಂದು ರಾಮಚಂದ್ರ ಅವರು ದೂರಿನಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!