Thursday, May 2, 2024
Homeಕರಾವಳಿಪುತ್ತೂರು : ಅನೈತಿಕ ಸಂಬಂಧಕ್ಕೆ ಯುವಕನ ಅಪಹರಿಸಿ‌ ಕೊಲೆ ಮಾಡಿದ ಪ್ರಕರಣ;ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಯ...

ಪುತ್ತೂರು : ಅನೈತಿಕ ಸಂಬಂಧಕ್ಕೆ ಯುವಕನ ಅಪಹರಿಸಿ‌ ಕೊಲೆ ಮಾಡಿದ ಪ್ರಕರಣ;ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಯ ಬಂಧನ; ಬಂಧಿತರ ಸಂಖ್ಯೆ 3 ಕ್ಕೆ ಏರಿಕೆ

spot_img
- Advertisement -
- Advertisement -

ಮಂಗಳೂರು : ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶ್ರೀಮತಿ ರೇಣವ್ವ ಮಾದರ (53) ಗಂಸ ಸುರೇಶ ವಾಸ ದಾನಕ ಶಿರೂರು ಬಾಗಲಕೋಟೆ ದಾಣಕ ಶಿರೂರು ನನ್ನ ಮಗ ಹನುಮಂತ (22) ಎಂಬಾತನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುಂಬ್ರ ಎಂಬಲ್ಲಿ ಟಿಪ್ಪರ್ ಚಾಲಕನಾಗಿ ಕೆಲಸ ಮಾಡುತ್ತಿರುವ ಸಮಯ ನ.17ರಂದು ಸಮಯ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕು ದಾನಕ ಶಿರೂರಿನ ನಿವಾಸಿ ಶಿವಪ್ಪ ಹನುಮಂತ ಶಿವಪ್ಪ ಮಾದರ್ (45), ಮಂಜುನಾಥ ಮಾದರ್, ಮತ್ತು ದುರ್ಗಪ್ಪ ಮಾದರ್ ಎಂಬವರು KA-26-B-3833 ಸಂಖ್ಯೆಯ ಮಹೀಂದ್ರಾ ಮಾಕ್ಸಿಮೋ ವಾಹನದಲ್ಲಿ ಬಂದು ಅಪಹರಿಸಿಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ನ.20 ರಂದು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ಪತ್ತೆ ಬಗ್ಗೆ ರವಿ.ಬಿಎಸ್ ಪಿಐ ಪುತ್ತೂರು ಗ್ರಾಮಾಂತರ ಠಾಣೆ ರವರು ವಿಶೇಷ ತಂಡವನ್ನು ನೇಮಿಸಿದ್ದು, ಈ ತಂಡವು ಶಿವಮೊಗ್ಗ, ಬಾಗಲಕೋಟೆ, ಬಾದಾಮಿ, ಗದಗ,ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬೆಂಗಳೂರು, ಕೋಲಾರ ಕಡೆಗಳಲ್ಲಿ ಸಂಚರಿಸಿ ಇಬ್ಬರು ಆರೋಪಿಗಳಾದ ಆರೋಪಿತರಾದ ಬಾಗಲಕೋಟೆ ಜಿಲ್ಲೆಯ ಬಾದಾಮಿ‌ ತಾಲೂಕಿನ  ದಾಣಕಶಿರೂರ್ ನಿವಾಸಿ ಹಮುಮಪ್ಪ ಮಾದರ್ ಮಗನಾದ ಶಿವಪ್ಪ ಹನುಮಂತ ಮಾದರ್ (45) ಮತ್ತು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ದಾಣಕಶಿರೂರ್ ನಿವಾಸಿ ಹನುಮಪ್ಪ ಮಾದರ್ ಮಗನಾದ ಮಂಜುನಾಥ ಮಾದರ್ (32) ರವರನ್ನು ಡಿ.8 ರಂದು ವಶಕ್ಕೆ ಪಡೆದು ವಿಚಾರಿಸಿದಾಗ ಆರೋಪಿಗಳು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ  ಮೊಣೆನಕೊಪ್ಪ ಮನೆ ನಿವಾಸಿ ದುರ್ಗಪ್ಪ ಮಾದರ (42) ಎಂಬವರ ಜೊತೆ ಸೇರಿಕೊಂಡು ಹನುಮಂತನನ್ನು ಅಪಹರಿಸಿಕೊಂಡು ಹೋಗಿ, ದಾರಿಮಧ್ಯೆ ಕೊಲೆ ಮಾಡಿ ಉಡುಪಿ ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಆಗುಂಬೆ ಘಾಟ್ ಪ್ರದೇಶದ ಕಾಡಿಗೆ ಬಿಸಾಡಿರುವುದಾಗಿ ಪೊಲೀಸರಲ್ಲಿ ತಪ್ಪೋಪ್ಪಿಕೊಂಡಿದ್ದರು.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ 8 ದಿನ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ನಂತರ ಆರೋಪಿಗಳು ಆಗುಂಬೆ ಘಾಟಿಯಲ್ಲಿ ಮೃತದೇಹವನ್ನು ಬಿಸಾಡಿರುವ ಜಾಗವನ್ನು ಡಿ.9 ರಂದು ತೋರಿಸಿಕೊಟ್ಟಿದ್ದು. ಆಗುಂಬೆ ಘಾಟಿಯ 13 ನೇ ತಿರುವಿನಲ್ಲಿ ಕೊಲೆಯಾದ ಹನುಮಂತನ ಮೃತ ದೇಹವು ಕೊಳೆತ ರೀತಿಯಲ್ಲಿ ಪತ್ತೆಯಾಗಿತ್ತು. ನಂತರ ಮಂಗಳೂರು ದೇರಳಕಟ್ಟೆ ವೈದ್ಯರಿಂದ ಸ್ಥಳದಲ್ಲಿಯೇ ಶವಪರೀಕ್ಷೆ ಮಾಡಿಸಿ ಆಗುಂಬೆ ಶವಗಾರದಲ್ಲಿ ದಫನ‌ ಮಾಡಿದ್ದರು.

ಈ ಪ್ರಕರಣದ ಎರಡನೇ ಆರೋಪಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ  ಮೊಣೆನಕೊಪ್ಪ ಮನೆ ನಿವಾಸಿ ದುರ್ಗಪ್ಪ ಮಾದರ (42) ಎಂಬಾತನನ್ನು ವಿಶೇಷ ತಂಡವು ಡಿ.12 ರಂದು ಬಂಧಿಸಿದ್ದು. ಅಪಹರಿಸಿದ ನಂತರ ಕೊಲೆ ಮಾಡಿ ಶವ ಸಾಗಿಸಲು ಉಪಯೋಗಿಸಿದ್ದ ವಾಹನವನ್ನು ವಶಪಡಿಸಿಕೊಂಡಿರುತ್ತಾರೆ.

ಈ ಕೊಲೆ ಪ್ರಕರಣಕ್ಕೆ ಶಿವಪ್ಪ ಹನುಮಂತ ಮಾದರ್ ರವರ ಪತ್ನಿಗೆ ಮತ್ತು ಕೊಲೆಯಾದ ಹನುಮಂತನಿಗೂ ಅನೈತಿಕ ಸಂಬಂಧ ಇದ್ದ ಕಾರಣಕ್ಕೆ ಹನುಮಂತನನ್ನು ಅಪಹರಿಸಿ ನಂತರ ಕೊಲೆ ಮಾಡಿರುವುದಾಗಿ ಆರೋಪಿತರು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.

- Advertisement -
spot_img

Latest News

error: Content is protected !!