Saturday, June 13, 2026
Homeಕರಾವಳಿದೈವಸ್ಥಾನದ ಮೇಲ್ಛಾವಣಿ ಕೆಡಹುವಾಗ ಕೆಳಕ್ಕೆ ಬಿದ್ದು ಕಂಬಳ ಕೋಣಗಳ ಮಾಲಿಕ ಮೃತ್ಯು

ದೈವಸ್ಥಾನದ ಮೇಲ್ಛಾವಣಿ ಕೆಡಹುವಾಗ ಕೆಳಕ್ಕೆ ಬಿದ್ದು ಕಂಬಳ ಕೋಣಗಳ ಮಾಲಿಕ ಮೃತ್ಯು

- Advertisement -
- Advertisement -

ಬಂಟ್ವಾಳ: ಬಡಗಕಜೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕಕಜೆಕಾರು ಎಂಬಲ್ಲಿ ದೈವಸ್ಥಾನದ ಮೇಲ್ಛಾವಣಿ ಕೆಡಹುವ ಸಂದರ್ಭದಲ್ಲಿ ಕೆಳಗೆ ಬಿದ್ದು ಕಂಬಳ ಕೋಣಗಳ ಯಜಮಾನನು ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ವ್ಯಕ್ತಿ ಬಡಗಕಜೆಕಾರು ಗ್ರಾಮದ ಕುಲೆಂಜಿಕೋಡಿ ನಿವಾಸಿ ಸುಂದರ ಪೂಜಾರಿ (55). ಮೇಸ್ತ್ರಿ ಕೆಲಸ ಮಾಡುತ್ತಿದ್ದ ಅವರು ತೆಂಕಕಜೆಕಾರಿನ ವಿಜಯಾ ಅವರ ದೈವಸ್ಥಾನದ ಕಟ್ಟಡ ಕೆಡಹುವ ಸಂದರ್ಭದಲ್ಲಿ ಸ್ಲಾಬ್ ಸಹಿತ ಕೆಳಕ್ಕೆ ಬಿದ್ದಿದ್ದಾರೆ. ತಕ್ಷಣವೇ ಗಂಭೀರ ಗಾಯಗೊಂಡ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಗಲೇ ಅವರು ಮೃತಪಟ್ಟಿದ್ದರು. 

ಈ ಘಟನೆ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕೋಣಗಳ ಯಜಮಾನರಾಗಿದ್ದ ಸುಂದರ ಪೂಜಾರಿ ಅವರು ಕಳೆದ 6 ವರ್ಷಗಳಿಂದ ಕಂಬಳ ಕೋಣಗಳ ಓಟದಲ್ಲಿ ತೊಡಗಿಸಿಕೊಂಡಿದ್ದರು. ಅವರ ಓಟದ ಕೋಣಗಳು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದವು.

- Advertisement -

Latest News

error: Content is protected !!