Tuesday, June 30, 2026
Homeಕರಾವಳಿಮಂಗಳೂರುಪುತ್ತೂರು: ಸ್ನೇಹಿತನಿಂದಲೇ ಯುವತಿ ತಾಯಿಯಾದ ಪ್ರಕರಣ; ಕೃಷ್ಣ ಜೆ. ರಾವ್ ಆಕೆಯನ್ನು ಮದುವೆಯಾಗುವುದೇ  ಸರಿ ಎಂದ...

ಪುತ್ತೂರು: ಸ್ನೇಹಿತನಿಂದಲೇ ಯುವತಿ ತಾಯಿಯಾದ ಪ್ರಕರಣ; ಕೃಷ್ಣ ಜೆ. ರಾವ್ ಆಕೆಯನ್ನು ಮದುವೆಯಾಗುವುದೇ  ಸರಿ ಎಂದ ಹೈಕೋರ್ಟ್

- Advertisement -
- Advertisement -

ಪುತ್ತೂರು: ಸ್ನೇಹಿತನಿಂದಲೇ ಯುವತಿ ತಾಯಿಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ಪುತ್ತೂರು ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ಜೆ. ರಾವ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿತು. ಈ ವೇಳೆ  ಯುವತಿಗೆ ಕೃಷ್ಣ ಜೆ. ರಾವ್ ನಿಂ ದಲೇ ಮಗುವಾಗಿರುವುದರಿಂದ ಆಕೆಯನ್ನು ಮದುವೆಯಾಗುವುದೇ ಸೂಕ್ತ  ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣ ರದ್ದು ಕೋರಿ ಕೃಷ್ಣ ಜೆ. ರಾವ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು, “ಯುವತಿ ಮತ್ತು ಮಗುವನ್ನು ಅನಾಥರನ್ನಾಗಿ ಮಾಡುವುದು ಸರಿಯಲ್ಲ. ತಂದೆಯಾಗಿ ಮಗುವಿನ ಆರೈಕೆ ಮಾಡುವುದು ಆರೋಪಿಯ ಕರ್ತವ್ಯ”. ಅಲ್ಲದೆ, ಯುವತಿಗೆ ಮಾಸಿಕ ₹10 ಸಾವಿರ ಜೀವನಾಂಶ ನೀಡಲು ಸಿದ್ಧರಿದ್ದಾರೆಯೇ ಎಂದು ಪ್ರಶ್ನಿಸಿ, ಏಪ್ರಿಲ್ 24ಕ್ಕೆ ವಿಚಾರಣೆ ಮುಂದೂಡಿದೆ.

 ಆರೋಪಿ ಪರ ವಾದ ಮಂಡಿಸಿದ ವಕೀಲ ಪಿ.ಪಿ. ಹೆಗ್ಡೆ ಅವರು, “ಇದು ಏಳು ವರ್ಷಗಳ ಪ್ರೀತಿಯಾಗಿದ್ದು, ರಾಜಕೀಯ ವಿರೋಧಿಗಳು ಆರೋಪಿಯ ತಂದೆಯ ತೇಜೋವಧೆ ಮಾಡಲು ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದಾರೆ” ಎಂದು ವಾದಿಸಿದರು. ಆದರೆ, ಮಗುವಿನ ಹಿತದೃಷ್ಟಿಯಿಂದ ನ್ಯಾಯಾಲಯವು ಮಾನವೀಯ ನೆಲೆಗಟ್ಟಿನಲ್ಲಿ ಮದುವೆಯಾಗುವಂತೆ ಸೂಚಿಸಿದೆ.

- Advertisement -

Latest News

error: Content is protected !!