Thursday, June 25, 2026
Homeಕರಾವಳಿವೇಣೂರಿನಲ್ಲಿ ಕ್ರಿಸ್ಮಸ್ ಸೌಹಾರ್ದ ಕೂಟ

ವೇಣೂರಿನಲ್ಲಿ ಕ್ರಿಸ್ಮಸ್ ಸೌಹಾರ್ದ ಕೂಟ

- Advertisement -
- Advertisement -

ವೇಣೂರು: ಕ್ರಿಸ್ತರಾಜ ದೇವಾಲಯ ವೇಣೂರು ವತಿಯಿಂದ ಕಥೋಲಿಕ್‌ ಸಭಾ-ವೇಣೂರು ಘಟಕ ಮತ್ತು ಐ.ಸಿ.ವೈ.ಎಮ್‌ ಇವರ ಸಹಕಾರದೊಂದಿಗೆ ಕ್ರಿಸ್ಮಸ್ ಸೌಹಾರ್ದ ಕೂಟವನ್ನ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಚರ್ಚಿನ ಧರ್ಮಗುರುಗಳಾದ ವಂ।ಫಾ. ಎಡ್ವಿನ್ ಸಂತೋಷ್ ಮೋನಿಸ್ ಅವರು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಖ್ಯಾತ ಚಿಂತಕ ಶ್ರೀ ಅರವಿಂದ ಚೊಕ್ಕಾಡಿ, ಸ್ಥಳೀಯ ಮಸೀದಿ ಖತೀಬರಾದ ಮುಹಮ್ಮದ್ ಜೌಹರ್ ಅಹ್ಸನಿ, ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾ ಕಾಶಿನಾಥ್, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಧಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜಯರಾಮ ಶೆಟ್ಟಿ ಭಾಗವಹಿಸಿದ್ದರು.

ಚರ್ಚ್ ಉಪಾಧ್ಯಕ್ಷ ಡೆನಿಸ್ ಸಿಕ್ವೇರ ಸ್ವಾಗತಿಸಿದರು. ಕಾರ್ಯದರ್ಶಿ ಜೆತ್ರುದ್ ಡಿ ಸೋಜ ವಂದಿಸಿದರು. ಶಿಕ್ಷಕ ವಿನೋದ್ ಮೋನಿಸ್ ಅವರು ಕಾರ್ಯಕ್ರಮ ನಿರೂಪಿಸಿದರು.ಸ್ಥಳೀಯ ಕೆಥೋಲಿಕ್ ಸಭಾ ಅಧ್ಯಕ್ಷ ಅರುಣ್ ಡಿ ಸೋಜ, ಐಸಿವೈಎಂ ಅಧ್ಯಕ್ಷೆ ಕು।ಜೆಸ್ವಿನ್ ಲೋಬೊ, ಚರ್ಚಿನ ಮಾಜಿ ಉಪಾಧ್ಯಕ್ಷರಾದ ಎಲ್ ಜೆ ಫೆರ್ನಾಂಡಿಸ್ ಮತ್ತು ಥಾಮಸ್ ರೆಮಿ ನೊರೋನ್ಹ ಸಹಕರಿಸಿದರು.

- Advertisement -

Latest News

error: Content is protected !!