Thursday, June 4, 2026
Homeಕರಾವಳಿಪುತ್ತೂರು-ಕಡಬ ತಾಲೂಕಿನಲ್ಲಿ ಇಂದು 4 ಮಂದಿಗೆ ಕೊರೋನ ಪಾಸಿಟಿವ್

ಪುತ್ತೂರು-ಕಡಬ ತಾಲೂಕಿನಲ್ಲಿ ಇಂದು 4 ಮಂದಿಗೆ ಕೊರೋನ ಪಾಸಿಟಿವ್

- Advertisement -
- Advertisement -

ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಇಂದು ನಾಲ್ಕು ಮಂದಿಗೆ ಕೊರೋನ ಪಾಸಿಟಿವ್ ಆಗಿರುವುದು ದೃಢವಾಗಿದೆ.

ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ಸರ್ವೆ ನಿವಾಸಿ 15 ವರ್ಷದ ಬಾಲಕಿಯಲ್ಲಿ ಸೋಂಕು ದೃಢಪಟ್ಟಿದೆ. ಈಕೆ ಈಗಾಗಲೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ನಗರಸಭೆ ವ್ಯಾಪ್ತಿಯ ಮರೀಲ್ ಎಂಬಲ್ಲಿನ ನಿವಾಸಿ 35 ವರ್ಷ ವಯಸ್ಸಿನ ಗೃಹಿಣಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ. ಅವರು ಜ್ವರದಿಂದ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ 27 ವರ್ಷದ ಯುವಕನೊಬ್ಬನಿಗೆ ಕೊರೋನ ಸೋಂಕು ತಗುಲಿದೆ. ಅವರು ಇತ್ತೀಚೆಗೆ ವಿದೇಶದಿಂದ ಆಗಮಿಸಿದ್ದು, ಈಗಾಗಲೇ ಕ್ವಾರಂಟೈನ್‌ನಲ್ಲಿ ಇದ್ದಾರೆ.

ಕಡಬ ತಾಲೂಕಿನ ಬಲ್ಯ ಹೊಸ್ಮಠ ನಿವಾಸಿ 22 ವರ್ಷದ ಯುವತಿಯಲ್ಲಿ ಕೊರೋನ ಪಾಸಿಟಿವ್ ಪತ್ತೆಯಾಗಿದೆ. ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು.

- Advertisement -

Latest News

error: Content is protected !!