- Advertisement -
- Advertisement -
ಪುತ್ತೂರಿನ ರೋಟರಿಪುರದಲ್ಲಿ ತೋಡಿನಲ್ಲಿ ವ್ಯಕ್ತಿಯ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇದೀಗ ವ್ಯಕ್ತಿಯ ಗುರುತು ಪತ್ತೆಯಾಗಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ. ಮೃತ ವ್ಯಕ್ತಿ ಪುತ್ತೂರು ನಿವಾಸಿ ನಂದಕುಮಾರ್ (61) ಎಂದು ಗೊತ್ತಾಗಿದೆ.
ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ನಂದ ಕುಮಾರ್ ರವರ ಮೃತದೇಹ ನೀರು ಹರಿಯುವ ತೋಡಿನಲ್ಲಿ ಪತ್ತೆಯಾಗಿದೆ . ನಾಪತ್ತೆಯಾಗುವ ನಂದಕರುಮಾರ್ ಪುತ್ತೂರಿನ ಸೊಸೈಟಿಯೊಂದರಿಂದ 1.40 ಲಕ್ಷ ಡ್ರಾ ಮಾಡಿದ್ದೂ ಶವದ ಬಳಿ ಹಣ ಕೊಂಡೊಯ್ದ ಖಾಲಿ ಚೀಲ ಮಾತ್ರ ಪತ್ತೆಯಾಗಿದೆ. ಯಾರೋ ಹಣವನ್ನು ಲೂಟಿಹೊಡೆದು ಕೊಲೆನಡೆಸಿರೋ ಶಂಕ್ಯೆ ವ್ಯಕ್ತವಾಗಿದೆ. ಪುತ್ತೂರು ನಗರ ಪೊಲೀಸರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
- Advertisement -