Wednesday, July 15, 2026
Homeಕರಾವಳಿಪುತ್ತೂರು; ರೈಲಿನಡಿಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದ ಪ್ರಕರಣ; ಮೃತ ವ್ಯಕ್ತಿಯ ಗುರುತು ಪತ್ತೆ

ಪುತ್ತೂರು; ರೈಲಿನಡಿಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದ ಪ್ರಕರಣ; ಮೃತ ವ್ಯಕ್ತಿಯ ಗುರುತು ಪತ್ತೆ

- Advertisement -
- Advertisement -

ಪುತ್ತೂರು ಅ.16ರಂದು ನೇರಳಕಟ್ಟೆ ಸಮೀಪ ರೈಲಿನಡಿಗೆ  ಬಿದ್ದು ಮೃತಪಟ್ಟಿದ್ದ ವ್ಯಕ್ತಿಯ  ಗುರುತು ಪತ್ತೆಯಾಗಿದೆ. ಮೃತರನ್ನು ಮಧ್ಯಪ್ರದೇಶದ ಜಗನ್ನಾಥ್‌ ಎಂದು ಗುರುತಿಸಲಾಗಿದೆ.

ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ರೈಲು ನೇರಳಕಟ್ಟೆ ಸಮೀಪ ನಿಧಾನವಾಗಿ ಚಲಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ರೈಲ್ವೇ ಹಳಿಗೆ ಆಕಸ್ಮಿಕವಾಗಿ ಬಂದು ರೈಲಿನಡಿಗೆ ಬಿದ್ದಿದ್ದರು. ರೈಲು ನಿಧಾನವಾಗಿ ಚಲಿಸುತ್ತಿದ್ದರಿಂದ ರೈಲಿನ ಪೈಲೆಟ್ ಚಲಿಸುತ್ತಿರುವ ರೈಲನ್ನು ನಿಲ್ಲಿಸಿ ತೀವ್ರ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ಅದೇ ರೈಲಿನಲ್ಲಿ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಕರೆ ತಂದಾಗ ದಾರಿ ಮಧ್ಯೆ ಮೃತಪಟ್ಟಿದ್ದರು.

- Advertisement -

Latest News

error: Content is protected !!